ಬೆಂಗಳೂರು: ಎಲ್ಲಾ ತಂಬಾಕು ಮಾರಾಟಗಾರರು ತಂಬಾಕು ಉತ್ಪನ್ನಗಳನ್ನು ಸಾರ್ವಜನಿಕವಾಗಿ ಮಾರಾಟ ಮಾಡಲು ಪ್ರತ್ಯೇಕ ಪರವಾನಿಗೆ ಪಡೆಯಬೇಕಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಂಬಾಕು ಉತ್ಪನ್ನಗಳ ಮಾರಾಟ ನಿಯಂತ್ರಿಸಲು ಹೊಸದಾಗಿ ಅಧಿಸೂಚಿತ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಹೊಸ ನಿಯಮದ ಪ್ರಕಾರ ಎಲ್ಲಾ ತಂಬಾಕು ಮಾರಾಟಗಾರರು ತಂಬಾಕು ಉತ್ಪನ್ನಗಳನ್ನು ಸಾರ್ವಜನಿಕವಾಗಿ ಮಾರಾಟ ಮಾಡಲು ಪ್ರತ್ಯೇಕ ಪರವಾನಿಗೆ ಪಡೆಯಬೇಕಿದೆ.
5 ವರ್ಷಗಳ ಅವಧಿಗೆ 500 ರೂ. ಪರವಾನಿಗೆ ಶುಲ್ಕ ನೀಡಬೇಕಿದೆ. ಪರವಾನಿಗೆ ಪಡೆಯದೆ ನಿಯಮ ಉಲ್ಲಂಘಿಸಿದರೆ ಒಂದು ಸಲಕ್ಕೆ 5000 ರೂ., ಆನಂತರ ದಿನಕ್ಕೆ 100 ರೂಪಾಯಿ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.