ನವದೆಹಲಿ: ಈ ವರ್ಷದ ಅಕ್ಟೋಬರ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಆದಾಯ ಸಂಗ್ರಹವು 13% ಹೆಚ್ಚಳವಾಗಿ 1.72 ಲಕ್ಷ ಕೋಟಿ ರೂ.ಗೆ ಜಿಗಿದಿದೆ. ಇದು ಇದುವರೆಗಿನ ಎರಡನೇ ಅತಿ ಹೆಚ್ಚು GST ಆದಾಯ ಸಂಗ್ರಹವಾಗಿದೆ.
ಇದು ಈ ಹಣಕಾಸು ವರ್ಷದ ಏಪ್ರಿಲ್ ತಿಂಗಳ ನಂತರದ ಎರಡನೇ ಅತಿ ಹೆಚ್ಚು ಒಟ್ಟು GST ಆದಾಯ ಸಂಗ್ರಹವಾಗಿದೆ. ಒಟ್ಟು ಜಿಎಸ್‌ಟಿಯಲ್ಲಿ 30,062 ಕೋಟಿ ರೂ. ಸಿಜಿಎಸ್‌ಟಿ, 38,171 ಕೋಟಿ ರೂ. ಎಸ್‌ಜಿಎಸ್‌ಟಿ, 91,315 ಕೋಟಿ ರೂ. ಐಜಿಎಸ್‌ಟಿ ಮತ್ತು 12,456 ಕೋಟಿ ರೂ. ಸೆಸ್ ಆಗಿದೆ.
ಅಕ್ಟೋಬರ್‌ನಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್‌ಟಿಗೆ 72,934 ಕೋಟಿ ರೂ. ಮತ್ತು ಎಸ್‌ಜಿಎಸ್‌ಟಿಗೆ 74,785 ಕೋಟಿ ರೂ. ಗಳಷ್ಟಿದೆ.
ಅಕ್ಟೋಬರ್‌ನಲ್ಲಿ, ದೇಶೀಯ ವಹಿವಾಟುಗಳಿಂದ(ಸೇವೆಗಳ ಆಮದು ಸೇರಿದಂತೆ) ಆದಾಯವು ಕಳೆದ ವರ್ಷದ ಇದೇ ತಿಂಗಳಿನಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ 13% ಹೆಚ್ಚಾಗಿದೆ.