ವಾರಕ್ಕೆ 5 ದಿನ ಕೆಲಸ, 2 ದಿನ ರಜೆ, ವೇತನ ಹೆಚ್ಚಳ: ಉದ್ಯೋಗಿಗಳ ಬಹು ದಿನಗಳ ಬೇಡಿಕೆ ಈಡೇರಿಸಲು ಜು. 28ರಂದು ತೀರ್ಮಾನ ಸಾಧ್ಯತೆ

ನವದೆಹಲಿ: ವಾರಕ್ಕೆ ಐದು ದಿನ ಕೆಲಸ, ಎರಡು ದಿನ ವಾರದ ರಜೆ, ವೇತನ ಹೆಚ್ಚಳ ಮತ್ತು ನಿವೃತ್ತಿ ವೇತನದದಾರರ ಗ್ರೂಪ್ ಮೆಡಿಕಲ್ ಇನ್ಸೂರೆನ್ಸ್ ಪಾಲಿಸಿ ಸೇರಿದಂತೆ ಬ್ಯಾಂಕ್ ಉದ್ಯೋಗಿಗಳ ಬಹುದಿನಗಳ ಬೇಡಿಕೆ ಈಡೇರಿಸುವ ಕುರಿತು ಭಾರತೀಯ ಬ್ಯಾಂಕಿಂಗ್ ಸಂಸ್ಥೆ(IBA) ಜುಲೈ 28ರಂದು ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.

ಬ್ಯಾಂಕ್ ನೌಕರರ ಸಂಘಟನೆ ಮತ್ತು ಭಾರತೀಯ ಬ್ಯಾಂಕಿಂಗ್ ಸಂಸ್ಥೆ ಮೊದಲ ಸಭೆ ಜುಲೈ 28ರಂದು ನಡೆಯಲಿದೆ. ಉದ್ಯೋಗಿಗಳ ಬೇಡಿಕೆಗೆ ಐಬಿಎ ಅನುಮೋದನೆ ನೀಡಿದಲ್ಲಿ ಬ್ಯಾಂಕ್ ಉದ್ಯೋಗಿಗಳಿಗೆ ನಾನಾ ಸೌಲಭ್ಯ ಸಿಗಲಿve.

ಹಿಂದೆ ನಡೆದ ಚರ್ಚೆಯಲ್ಲಿ ಬ್ಯಾಂಕ್ ನೌಕರರ ಐದು ದಿನಗಳ ಕೆಲಸದ ಬೇಡಿಕೆ ಬಗ್ಗೆ ಚರ್ಚಿಸಲಾಗಿದ್ದು, ಐಬಿಎ ಈ ಬೇಡಿಕೆಯನ್ನು ಈಡೇರಿಸಲು ಉಚ್ಚುಕವಾಗಿದೆ ಎಂದು ಯುನೈಟೆಡ್ ಫಾರ್ಮ್ ಆಫ್ ಬ್ಯಾಂಕ್ ಯೂನಿಯನ್(UFBU) ಹೇಳಿದೆ.

ನಿವೃತ್ತಿ ಹೊಂದಿದ ಬ್ಯಾಂಕ್ ನೌಕರರಿಗೆ 2 ಲಕ್ಷ ರೂ.ಗಳ ಪ್ರತ್ಯೇಕ ಏಕರೂಪ ವಿಮೆ ಜಾರಿಗೊಳಿಸಲು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಒಪ್ಪಿಕೊಂಡಿದ್ದು, ವೇತನ ಹೆಚ್ಚಳದ ಬೇಡಿಕೆ ಕೂಡ ಸೇರಿದೆ. ಐದು ದಿನಗಳ ಕೆಲಸದ ಪದ್ಧತಿ ಜಾರಿಗೊಳಿಸಬೇಕೆಂಬ ನೌಕರರ ಬೇಡಿಕೆಗೆ ಅಭ್ಯಂತರವಿಲ್ಲವೆಂದು ಕೇಂದ್ರ ಹಣಕಾಸು ಮಂತ್ರಾಲಯ ಈ ಹಿಂದೆಗೆ ಹೇಳಿದೆ. ಭಾರತೀಯ ಬ್ಯಾಂಕಿಂಗ್ ಅಸೋಸಿಯೇಷನ್ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯ ಪ್ರಕಾರ ಐದು ದಿನ ಕೆಲಸ ಇರಲಿದ್ದು, ದೈನಂದಿನ ಕೆಲಸದ ಸಮಯವನ್ನು 40 ನಿಮಿಷದವರೆಗೆ ಹೆಚ್ಚಳ ಮಾಡಲಾಗುವುದು.

ಎಲ್ಐಸಿಯಲ್ಲಿ ಈಗಾಗಲೇ ವಾರದಲ್ಲಿ ಐದು ದಿನಗಳ ಕೆಲಸದ ನಿಯಮ ಜಾರಿಗೊಳಿಸಿದೆ. ಇದೇ ಮಾದರಿಯಲ್ಲಿ ಬ್ಯಾಂಕ್ ಉದ್ಯೋಗಿಗಳಿಗೂ ವಾರದಲ್ಲಿ ಐದು ದಿನದ ಕೆಲಸದ ಪದ್ಧತಿ ಜಾರಿಗೊಳಿಸಬೇಕೆಂಬ ಬೇಡಿಕೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read