HomeKarnatakaBIG NEWS: ಕುಖ್ಯಾತ ಭೂಕಬಳಿಕೆದಾರ ಜಾನ್ ಮೋಸನ್ ಅರೆಸ್ಟ್

BIG NEWS: ಕುಖ್ಯಾತ ಭೂಕಬಳಿಕೆದಾರ ಜಾನ್ ಮೋಸನ್ ಅರೆಸ್ಟ್

ಬೆಂಗಳೂರು: ಕುಖ್ಯಾತ ಭೂಕಬಳಿಕೆದಾರ ಜಾನ್ ಮೋಸನ್ ನನ್ನು ಸಿಐಡಿ ಅಧಿಕಾರಿಗಳು ಕೋಕಾ ಕಾಯ್ದೆಯಡಿ ಬಂಧಿಸಿದ್ದಾರೆ.

ನಕಲಿ ದಾಖಲೆ ಹಾಗೂ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಆಸ್ತಿ ಕಬಳಿಕೆ ಮಾಡುತ್ತಿದ್ದ ಜಾನ್ ಮೋಸನ್ ಹಾಗೂ ಗ್ಯಾಂಗ್ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಬೆಂಗಳೂರಿನ ಕಲ್ಯಾಣ ನಗರದ ನಿವಾಸಿಯಾಗಿರುವ ಜಾನ್ ಮೋಸನ್ 16 ಜನರ ಗ್ಯಾಂಗ್ ಕಟ್ಟಿಕೊಂಡು ಭೂಕಬಳಿಕೆ ಮಾಡುತ್ತಿದ್ದ. 2020ರಲ್ಲಿ ಜಾನ್ ಮೋಸನ್ ಹಾಗೂ ಗ್ಯಾಂಗ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು. ಸಿಐಡಿ ತನಿಖೆಯ ವೇಳೆ ಜಾನ್ ಮೋಸನ್ ಹಾಗೂ ಗ್ಯಾಂಗ್ ನ ಮತ್ತಷ್ಟು ಚಟುವಟಿಕೆಗಳು ಬಯಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿಗಳ ವಿರುದ್ಧ 100ಕ್ಕೂ ಹೆಚ್ಚು ಕೇಸ್ ಗಳು ದಾಖಲಾಗಿದ್ದವು. ಸದ್ಯ 51 ಪ್ರಕರಣಗಳ ತನಿಖೆ ಮುಕ್ತಾಯಗೊಂಡು ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಇದೀಗ ಕೋಕಾ ಕಾಯ್ದೆಯಡಿ ಜಾನ್ ಮೋಸನ್ ನನ್ನು ಸಿಐಡಿ ಬಂಧಿಸಿದೆ.

 

For Latest News Updates, Join Our Whatsapp Community🚩
RELATED ARTICLES

Most Popular