HomeKarnatakaಹಳೆ ದಾಖಲೆ ಸಂರಕ್ಷಣೆಗೆ ಮಹತ್ವದ ಕ್ರಮ: ಎಲ್ಲಾ ತಾಲ್ಲೂಕುಗಳಿಗೂ 'ಭೂ ಸುರಕ್ಷೆ' ಯೋಜನೆ ವಿಸ್ತರಣೆ

ಹಳೆ ದಾಖಲೆ ಸಂರಕ್ಷಣೆಗೆ ಮಹತ್ವದ ಕ್ರಮ: ಎಲ್ಲಾ ತಾಲ್ಲೂಕುಗಳಿಗೂ ‘ಭೂ ಸುರಕ್ಷೆ’ ಯೋಜನೆ ವಿಸ್ತರಣೆ

ಬೆಳಗಾವಿ: ಕಂದಾಯ ಮತ್ತು ಸರ್ವೆ ಇಲಾಖೆಗಳ ಹಳೆಯ ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡೇಟಾಬೇಸ್ ನಲ್ಲಿ ಸಂರಕ್ಷಿಸಲು ಭೂ ಸುರಕ್ಷೆ ಯೋಜನೆ ಜಾರಿಗೊಳಿಸಲಾಗಿದೆ. 31 ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದ ಭೂಸುರಕ್ಷೆ ಯೋಜನೆಯನ್ನು ಉಳಿದ 210 ತಾಲ್ಲೂಕುಗಳಿಗೂ ವಿಸ್ತರಿಸುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯ ಸುನಿಲ್ ವಲ್ಯಾಪುರೆ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಕೃಷ್ಣ ಬೈರೇಗೌಡ, ಮೂಲ ದಾಖಲೆಗಳ ಸ್ಕ್ಯಾನಿಂಗ್ ಪ್ರಕ್ರಿಯೆ 31 ತಾಲ್ಲೂಕುಗಳಲ್ಲಿ ಪೂರ್ಣಗೊಂಡಿದೆ. 2025ರ ಡಿಸೆಂಬರ್ ವೇಳೆಗೆ ಉಳಿದ ತಾಲೂಕುಗಳಲ್ಲಿಯೂ ದಾಖಲೆಗಳ ಸ್ಕ್ಯಾನಿಂಗ್ ಆಗಲಿದ್ದು, ಜನರಿಗೆ ಆನ್ಲೈನ್ ನಲ್ಲಿಯೂ ದಾಖಲೆಗಳು ಲಭ್ಯವಾಗಲಿವೆ. ಪ್ರಮುಖ ದಾಖಲೆಗಳ ಮೂಲ ಪ್ರತಿಯನ್ನು ತಾಲೂಕು ಮಟ್ಟದಲ್ಲಿ ವೈಜ್ಞಾನಿಕವಾಗಿ ಸಂರಕ್ಷಿಸಲು ತಾಲೂಕಿಗೆ ಒಂದು ಕಾಂಪ್ಯಾಕ್ಟರ್ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular