HomeLatest NewsBIG NEWS: ಇನ್ಮುಂದೆ ಲಾಲ್ ಬಾಗ್ ನಲ್ಲಿಯೂ ವೆಡ್ಡಿಂಗ್ ಫೋಟೋಶೂಟ್, ಸಿನಿಮಾ ಚಿತ್ರೀಕರಣ ನಿಷೇಧ!

BIG NEWS: ಇನ್ಮುಂದೆ ಲಾಲ್ ಬಾಗ್ ನಲ್ಲಿಯೂ ವೆಡ್ಡಿಂಗ್ ಫೋಟೋಶೂಟ್, ಸಿನಿಮಾ ಚಿತ್ರೀಕರಣ ನಿಷೇಧ!

ಬೆಂಗಳೂರು: ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಇನ್ಮುಂದೆ ವೆಡ್ಡಿಂಗ್ ಫೋಟೋ ಶೂಟ್, ಮಾಡೆಲಿಂಗ್, ರೀಲ್ಸ್ ವಿಡಿಯೋ, ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಬೀಳಲಿದೆ. ಈ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆ ಸಿದ್ಧತೆ ನಡೆಸಿದೆ.

ಕೆಲ ದಿನಗಳ ಹಿಂದಷ್ಟೇ ಕಬ್ಬನ್ ಪಾರ್ಕ್ ನಲ್ಲಿ ರೀಲ್ಸ್, ಸಿನಿಮಾ, ಕಿರುತೆರೆ ಚಿತ್ರೀಕರಣ, ಪ್ರೀ ವೆಡ್ದಿಂಗ್ ಫೋಟೋ ಶೂಟ್, ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಸೇರಿದಂತೆ ಇತರ ಚಿತ್ರೀಕರಣಕ್ಕೆ ನಿಷೇಧ ಹೇರಿ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಇದರ ಬೆನ್ನಲ್ಲೇ ಸಸ್ಯಕಾಶಿ ಲಾಲ್ ಬಾಗ್ ನಲ್ಲಿಯೂ ಚಿತ್ರೀಕರಣಕ್ಕೆ ನಿಷೇಧ ಹೇರಲು ತೋಟಗಾರಿಕಾ ಇಲಾಖೆ ಮುಂದಾಗಿದೆ.

ಲಾಲ್ ಬಾಗ್ ಸಸ್ಯಶಾಸ್ತ್ರೀಯ ತೋಟ. ಇಲ್ಲಿ ಮರ-ಗಿಡಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಇದು ಜೀವವೈವಿದ್ಯತೆಯ ತಾಣ. ಪ್ರಾಣಿ-ಪಕ್ಷಗಳು ಸ್ವಚ್ಛಂದವಾಗಿ ವಾಸವಾಗಲು ಯಾವುದೇ ರೀತಿಯ ಅಡ್ಡಿ ಆತಂಕವಾಗದಂತೆ ಮುನ್ನೆಚ್ಚರಿಕೆ ವಹಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಬ್ಬನ್ ಪಾರ್ಕ್ ನಂತೆಯೇ ಲಾಲ್ ಬಾಗ್ ಸಂರಕ್ಷಣಾ ಹಿತದೃಷ್ಟಿಯಿಂದ ಫೋಟೋ ಶೂಟ್ ವಿಡಿಯೋ ಚಿತ್ರೀಕರಣಕ್ಕೆ ನಿಷೇಧ ಹೇರಲು ಯಲ್ಲಪ್ಪ ರೆಡ್ಡಿ ಸಮಿತಿ ಸಲಹೆ ಮೇರೆಗೆ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ನಿಯಮಗಳ ಪಟ್ಟಿ ಸಿದ್ಧಪಡಿಸುತ್ತಿದ್ದು ಇಲಾಖೆ ನಿರ್ದೇಶಕರು ಅಂತಿಮ ತೀರ್ಮಾನ ಕೈಗೊಂಡ ಬಳಿಕ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಲಾಲ್ ಬಾಗ್ ನಲ್ಲಿ ಹೆಜ್ಜೇನುಗಳು ಗೂಡುಕಟ್ಟಿವೆ. ಸಿನಿಮಾ ಚಿತ್ರೀಕರಣ, ಫೋಟೋ ಶೂಟ್ ಗಳಿಂದಾಗಿ ಫ್ಲ್ಯಾಶ್ ಲೈಟ್ ಗಳಿಂದಾಗಿ ಜೇನುಗಳಿಗೆ ಕಿರಿಕಿರಿಯಾದರೆ ಮನುಷ್ಯರ ಮೇಲೆ ದಾಳಿ ನಡೆಸುವ ಸಾಧ್ಯತೆ ಹೆಚ್ಚು. ಈ ಹಿಂದೆಯೂ ಇಂತಹ ಘಟನೆಗಳು ನಡೆದಿದೆ.

ಪ್ರೀ, ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್ ಗಳಲ್ಲಿ ಸಾರ್ವಜನಿಕ ಸ್ಥಳ ಎಂಬುದನ್ನೂ ಮರೆತು ಅಶ್ಲೀಲವಾಗಿ ಇತರರಿಗೆ ಮುಜುಗರ ತರುವಂತ ರೀತಿಯಲ್ಲಿ ಫೋಟೋ, ವಿಡಿಯೋಗಳನ್ನು ಚಿತ್ರೀಕರಿಸುತ್ತಾರೆ. ಉದ್ಯಾನವನಕ್ಕೆ ಹಿರಿಯನಾಗರಿಕರು, ಮಕ್ಕಳು, ಮಹಿಳೆಯರು, ಪ್ರವಾಸಿಗರು ಬರುತ್ತಾರೆ. ಅಂತವರಿಗೆ ಮುಜುಗರವಾಗುವುದನ್ನು ತಪ್ಪಿಸುವ ಉದ್ದೇಶ ಹೊಂದಲಾಗಿದೆ.

ಮುಖ್ಯವಾಗಿ ಮರ-ಗಿಡಗಳ ಮೇಲೆ ಕುಳಿತು ಫೋಟೋ, ವಿಡಿಯೋ ತೆಗೆದುಕೊಳ್ಳುವುದರಿಂದ ಮರಗಳಿಗೂ ಹಾನಿಯಾಗುತ್ತದೆ. ಮರ ಹತ್ತಿದಾಗ ರೆಂಬೆ, ಕೊಂಬೆ ಮುರಿದು ಬಿದ್ದರೆ ಜೀವಹಾನಿ ಸಂಭಿಸುವ ಸಾಧ್ಯತೆ ಇದೆ. ಹೀಗಾಗಿ ಲಾಲ್ ಬಾಗ್ ನಲ್ಲಿ ಚಿತ್ರೀಕರಣ, ಫೋಟೋ ಶೂಟ್ ನಿಷೇಧಿಸಲು ಚಿಂತನೆ ನಡೆದಿದೆ ಎಂದು ವಿವರಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular