BIG NEWS: ಲಕ್ಷ್ಮಣ ಸವದಿ ಮಾತ್ರವಲ್ಲ, ದೇಶ ಮುಖ್ಯ ಎಂಬ ಮನೋಭಾವದವರೆಲ್ಲ ಬಿಜೆಪಿಗೆ ಬರಬೇಕು: ಸಿ.ಟಿ.ರವಿ ಕರೆ

ಬಳ್ಳಾರಿ: ಅಥಣಿ ಕಾಂಗ್ರೆಸ್ ಶಾಸಕ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿಗೆ ಮರು ಸೇರ್ಪಡೆ ವಿಚಾರವಾಗಿ ಮಾತನಾಡಿದ ಬಿಜೆಪಿ ನಾಯಕ ಸಿ.ಟಿ.ರವಿ, ಸವದಿ ಮಾತ್ರವಲ್ಲ, ದೇಶ ಮುಖ್ಯ ಎಂಬ ಮನೋಭಾವ ಇರುವವರೆಲ್ಲ ಬಿಜೆಪಿಗೆ ಸೇರಬೇಕು ಎಂದು ಹೇಳಿದರು.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಅಧಿಕಾರ ವ್ಯಾಮೋಹ, ಸ್ವಜನ ಪಕ್ಷಪಾತ, ಸ್ವಾರ್ಥ ಎಲ್ಲವನ್ನೂ ಮೀರಿ ದೇಶ ಮುಖ್ಯ ಅನ್ನುವವರು ಬೇರೆ ಪಕ್ಷಗಳಲ್ಲಿಯೂ ಇರಬಹುದು. ಅವರೆಲ್ಲ ಬಿಜೆಪಿಗೆ ಬರಬೇಕು ಎಂದು ಕರೆ ನೀಡಿದರು.

ದೇಶ ಈಗ ನಿರ್ಣಾಯಕ ಹಂತದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭವ್ಯ ಭಾರತ ನಿರ್ಮಾಣದ ಬೀಜಾಂಕುರವಾಗಿದೆ. ಅದನ್ನು ವಟ ವೃಕ್ಷವನ್ನಾಗಿ ಬೆಳೆಸಲು ಸಮಾನ ಮನಸ್ಕರರೆಲ್ಲರೂ ಪ್ರಧಾನಿಯವರೊಂದಿಗೆ ಕೈ ಜೋಡಿಸಬೇಕು ಎಂದು ಹೇಳಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read