HomeKarnatakaBIG NEWS: ಬುದ್ಧಿ ಹೇಳಿದ್ದಕ್ಕೆ ಮಹಿಳಾ PSI ಮೇಲೆ ವ್ಯಕ್ತಿಯ ದರ್ಪ; ಬೈಕ್ ಡಿಕ್ಕಿ ಹೊಡೆದು...

BIG NEWS: ಬುದ್ಧಿ ಹೇಳಿದ್ದಕ್ಕೆ ಮಹಿಳಾ PSI ಮೇಲೆ ವ್ಯಕ್ತಿಯ ದರ್ಪ; ಬೈಕ್ ಡಿಕ್ಕಿ ಹೊಡೆದು ಬೀಳಿಸಿದ ಭೂಪ ಅರೆಸ್ಟ್

ಬೆಂಗಳೂರು: ಪ್ರೊಬೇಷನರಿ ಮಹಿಳಾ ಪಿಎಸ್ಐ ಮೇಲೆ ವ್ಯಕ್ತಿಯೋರ್ವ ದರ್ಪ ಮೆರೆದ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವೇಗವಾಗಿ ಬೈಕ್ ಓಡಿಸುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಪಿಎಸ್ಐ ಮೇಲೆ ದರ್ಪ ತೋರಿದ್ದಾನೆ.

ವೇಗವಾಗಿ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ವ್ಯಕ್ತಿಯೋರ್ವನಿಗೆ ಪ್ರೋಬೇಷನರಿ ಪಿಎಸ್ಐ ಅಶ್ವಿನಿ, ಬುದ್ಧಿ ಹೇಳಿದ್ದಾರೆ. ಬುದ್ಧಿ ಹೇಳಿ ಹೋಗುತ್ತಿದ್ದ ಮಹಿಳಾ ಪಿಎಸ್ಐಗೆ ಬೈಕ್ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಪ್ರೊಬೇಷನರಿ ಮಹಿಳಾ ಪಿಎಸ್ ಐ ಬೈಕ್ ನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಸುಬ್ಬಣ್ಣ ಗಾರ್ಡ್ ಬಳಿ ಈ ಘಟನೆ ನಡೆದಿದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿ ಭರತ್ ವಿರುದ್ಧ ಪ್ರಕರಣ ದಾಖಲಾಗಿದೆ. ಗೋವಿಂದರಾಜನಗರ ನಿವಾಸಿಯಾದ ಆರೋಪಿ ಭರತ್ ನನ್ನು ಪೊಲೀಸರು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular