HomeLatest Newsರಾಜ್ಯಾದ್ಯಂತ 'ಪಟಾಕಿ' ಮಾರಾಟಕ್ಕೆ 18 ವರ್ಷದೊಳಗಿನ ಮಕ್ಕಳನ್ನ ಬಳಸಿಕೊಳ್ಳದಂತೆ 'ಕಾರ್ಮಿಕ ಇಲಾಖೆ' ಆದೇಶ

ರಾಜ್ಯಾದ್ಯಂತ ‘ಪಟಾಕಿ’ ಮಾರಾಟಕ್ಕೆ 18 ವರ್ಷದೊಳಗಿನ ಮಕ್ಕಳನ್ನ ಬಳಸಿಕೊಳ್ಳದಂತೆ ‘ಕಾರ್ಮಿಕ ಇಲಾಖೆ’ ಆದೇಶ

ದೀಪಾವಳಿ ಹಬ್ಬದ ಪ್ರಯುಕ್ತ ತೆರೆಯುವ ಪಟಾಕಿ ಮಾರಾಟ ಮಳಿಗೆಗಳು, ಪಟಾಕಿ ತಯಾರಿಕೆ ಸೇರಿದಂತೆ ಇತರೆ ಪ್ರಕ್ರಿಯೆಗಳಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳದಂತೆ ನಿಷೇಧಿಸಿ ಕಾರ್ಮಿಕ ಅಧಿಕಾರಿ ಹಾಗೂ ಜಿಲ್ಲಾ ಕಾರ್ಮಿಕ ಯೋಜನಾ ಸೊಸೈಟಿಯ ಸದಸ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016 ರನ್ವಯ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಸಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಯಲ್ಲಿ ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ತಪ್ಪಿದಲ್ಲಿ ಕಾಯ್ದೆಯಡಿ ಕಾನೂನು ಕ್ರಮವನ್ನು ಜರುಗಿಸಲಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular