HomeKarnatakaBIG NEWS: ಪೆನ್ ಡ್ರೈವ್ ವ್ಯಾಪಾರಕ್ಕಿಟ್ಟವನೇ ಈ ದೇವರಾಜೇಗೌಡ; ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವಾಗ್ದಾಳಿ

BIG NEWS: ಪೆನ್ ಡ್ರೈವ್ ವ್ಯಾಪಾರಕ್ಕಿಟ್ಟವನೇ ಈ ದೇವರಾಜೇಗೌಡ; ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವಾಗ್ದಾಳಿ

ಬೆಂಗಳೂರು: ಪೆನ್ ಡ್ರೈವ್ ವಿಚಾರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಬಿಜೆಪಿ ಮುಖಂಡ, ವಕೀಲ ದೆವರಾಜೇಗೌಡ ಅನಗತ್ಯವಾಗಿ ನಮ್ಮ ಹೆಸರನ್ನು ಹೇಳುತ್ತಿದ್ದಾನೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಲ್.ಆರ್.ಶಿವರಾಮೇಗೌಡ, ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಲಾಗಿದೆ. ತನಿಖೆ ದಿಕ್ಕು ತಪ್ಪಿಸಲು ಬೇರೆ ಬೇರೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಪೆನ್ ಡ್ರೈವ್ ವಿಚಾರಕ್ಕೂ ನಮಗೂ, ಡಿ.ಕೆ.ಶಿವಕುಮಾರ್ ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.

ಪೆನ್ ಡ್ರೈವ್ ವ್ಯಾಪಾರಕ್ಕಿಟ್ಟವನೇ ಈ ದೇವರಾಜೇಗೌಡ. ವಕೀಲ ದೇವರಾಜೇಗೌಡ ಒಬ್ಬ ನಾಲಾಯಕ್. ಪ್ರಕರಣದ ವಿಚಾರ ಈಗ ಎಲ್ಲೆಲ್ಲೋ ಹೋಗುತ್ತಿದೆ. ಯಾರೂ ಕೂಡ ದೇವರಾಜೇಗೌಡನನ್ನು ನಂಬ ಬೇಡಿ.ಆತ ಒಬ್ಬ ವಂಚಕ ಎಂದು ಆಕ್ರೋಶ ವ್ಯಕ್ತಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನನಗೆ ಮೊದಲು ದೇವರಾಜೇಗೌಡ ಫೋನ್ ಮಾಡಿದ್ದ. ಡಿ.ಕೆ.ಶಿವಕುಮಾರ್ ಭೇಟಿ ಮಾಡಿಸುವಂತೆ ನನಗೆ ಫೋನ್ ನಲ್ಲಿ ಹೇಳಿದ್ದ. ನಾನು ಆಗಲಿ ಎಂದಿದ್ದೆ. ಈ ಮಾತನ್ನೇ ಇಟ್ಟುಕೊಂಡು ದೇವರಾಜೇಗೌಡ ಸುಳ್ಳು ಮಾಹಿತಿ ನೀಡುತ್ತಿದ್ದಾನೆ. ನನಗೂ ಈ ಪೆನ್ ಡ್ರೈವ್ ಗೂ ಯಾವುದೇ ಸಂಬಂಧವಿಲ್ಲ ಎಂದರು.

ಈಗ 100 ಕೋಟಿ ಆಫರ್ ಎಂದು ಆರೋಪಿಸುತ್ತಿದ್ದಾನೆ. ನಾನು ಅಮಿತ್ ಶಾ ಭೇಟಿಯಾಗಿದ್ದೆ ಎಂದೂ ಹೇಳುತ್ತಾನೆ. ಅಮಿತ್ ಶಾ, ಮೋದಿ ಎಲ್ಲರೂ ಗೊತ್ತು ಅಂತಾನೆ. ಆದರೆ ಆತನಿಗೆ ಯಾರ ಪರಿಚಯವೂ ಇಲ್ಲ. ದೇವರಾಜೇಗೌಡ ಒಬ್ಬ ವಂಚಕ ಎಂದು ಕಿಡಿಕಾರಿದರು.

For Latest News Updates, Join Our Whatsapp Community🚩
RELATED ARTICLES

Most Popular