HomeKarnatakaಕುವೈತ್ ಅಗ್ನಿದುರಂತದಲ್ಲಿ 45 ಭಾರತೀಯರು ಸಾವು; ಕಲಬುರ್ಗಿಯ ವಿಜಯ್ ಕುಮಾರ್ ಮೃತದೇಹ ಸ್ವಗ್ರಾಮಕ್ಕೆ

ಕುವೈತ್ ಅಗ್ನಿದುರಂತದಲ್ಲಿ 45 ಭಾರತೀಯರು ಸಾವು; ಕಲಬುರ್ಗಿಯ ವಿಜಯ್ ಕುಮಾರ್ ಮೃತದೇಹ ಸ್ವಗ್ರಾಮಕ್ಕೆ

ಕಲಬುರ್ಗಿ: ಕುವೈತ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 45 ಭಾರತೀಯರು ಸಜೀವದಹನವಾಗಿದ್ದಾರೆ. ಅವರಲ್ಲಿ ಕಲಬುರ್ಗಿ ಮೂಲದ ವ್ಯಕ್ತಿ ಕೂಡ ಮೃತಪಟ್ಟಿದ್ದಾರೆ.

ಕಲಬುರ್ಗಿ ಜಿಲ್ಲೆಯ ಸರಸಂಬಾ ಗ್ರಾಮದ ವಿಜಯ್ ಕುಮಾರ್, ಕುವೈತ್ ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಅಗ್ನಿ ದುರಂತದಲ್ಲಿ ಅವರು ಕೂಡ ಮೃತಪಟ್ಟಿದ್ದರು.

ವಿಜಯ್ ಕುಮಾರ್ ಅವರ ಮೃತದೇಹ ಸ್ವಗ್ರಾಮ ಸರಸಂಬಾಗೆ ಆಗಮಿಸಿದ್ದು, ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ. ಬೆಳಿಗ್ಗೆ 11 ಗಂಟೆಗೆ ಸರಸಂಬಾ ಗ್ರಾಮದ ಜಮೀನಿನಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular