HomeKarnatakaH.D ಕುಮಾರಸ್ವಾಮಿಗೆ ಬಡವರು, ಹೆಣ್ಣು ಮಕ್ಕಳ ನೋವು ಗೊತ್ತಿಲ್ಲ : ಡಿಸಿಎಂ ಡಿಕೆ ಶಿವಕುಮಾರ್

H.D ಕುಮಾರಸ್ವಾಮಿಗೆ ಬಡವರು, ಹೆಣ್ಣು ಮಕ್ಕಳ ನೋವು ಗೊತ್ತಿಲ್ಲ : ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಬಡವರು, ಹೆಣ್ಣು ಮಕ್ಕಳ ನೋವು ಗೊತ್ತಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ‘ ಕುಮಾರಸ್ವಾಮಿಗೂ ಗ್ಯಾರಂಟಿ ಗಳಿಗೆ ಏನು ಸಂಬಂಧ..? ಗ್ಯಾರಂಟಿ ಬಗ್ಗೆ ಅವರಿಗೆ ಏನು ಗೊತ್ತಿದೆ. ಅವರಿಗೆ ಪಂಚರತ್ನ ಯೋಜನೆಯನ್ನು ಜಾರಿಗೆ ತರಲು ಆಗಿಲ್ಲ ಎಂದರು.

ಅವರಿಗೆ ಬಡವರ, ಹೆಣ್ಣು ಮಕ್ಕಳ ನೋವು ಗೊತ್ತಿಲ್ಲ. ಖುಷಿಯಿಂದ ಹಬ್ಬ ಆಚರಣೆ ಮಾಡುತ್ತಿದ್ದಾರೆ ಎಂದರು.
ಜನ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ತಂದಿದ್ದಾರೆ. ತೆಲಂಗಾಣ ಚುನಾವಣೆಯಲ್ಲಿ 6 ಭರವಸೆ ನೀಡಿದ್ದೇವೆ. ಹೈಕಮಾಂಡ್ ಏನ್ ಹೇಳುತ್ತದೆ. ಅದನ್ನು ನಾವು ಪಾಲಿಸುತ್ತೇವೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular