HomeLatest Newsಎರಡು ತಿಂಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ 14.77 ಕೋಟಿ ರೂ. ಆದಾಯ

ಎರಡು ತಿಂಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ 14.77 ಕೋಟಿ ರೂ. ಆದಾಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎರಡು ತಿಂಗಳಲ್ಲಿ 14.77 ಕೋಟಿ ರೂ. ಆದಾಯ ಬಂದಿದೆ.

2025ರ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ವಿವಿಧ ಸೇವೆ, ಹುಂಡಿ, ಅನ್ನದಾನ ನಿಧಿಯಿಂದ 14.77 ಕೋಟಿ ರೂಪಾಯಿ ಆದಾಯ ಬಂದಿದೆ. ನವೆಂಬರ್ ನಲ್ಲಿ ಹುಂಡಿಯಿಂದ 1.09 ಕೋಟಿ ರೂ., ವಿವಿಧ ಸೇವೆಗಳಿಂದ 4.56 ಕೋಟಿ ರೂ., ಅನ್ನದಾನ ನಿಧಿಯಿಂದ 83.57 ಲಕ್ಷ ರೂ. ಆದಾಯ ಬಂದಿದೆ.

ಡಿಸೆಂಬರ್ ನಲ್ಲಿ ವಿವಿಧ ಸೇವೆಗಳಿಂದ 5.30 ಕೋಟಿ ರೂ., ಹುಂಡಿಯಿಂದ 1.9 ಕೋಟಿ ರೂ., ಅನ್ನದಾನ ನಿಧಿಯಿಂದ 1.07 ಕೋಟಿ ರೂ. ಆದಾಯ ಬಂದಿದೆ. ವಸತಿ ಗೃಹ, ಇತರೆ ಮೂಲಗಳಿಂದ ಕೂಡ ಆದಾಯ ಬಂದಿದೆ. ಒಟ್ಟಾರೆ ಎರಡು ತಿಂಗಳಲ್ಲಿ 14.77 ಕೋಟಿ ರೂ. ಆದಾಯ ಬಂದಿದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular