HomeEntertainment'ಕುಬುಸ' ಚಿತ್ರದ ಟ್ರೈಲರ್ ರಿಲೀಸ್

‘ಕುಬುಸ’ ಚಿತ್ರದ ಟ್ರೈಲರ್ ರಿಲೀಸ್

ರಘುರಾಮ್ ಚರಣ್ ಆಕ್ಷನ್ ಕಟ್ ಹೇಳಿರುವ ಕುಂ.ವೀರಭದ್ರಪ್ಪ ಕಥೆಯಾಧಾರಿತ ‘ಕುಬುಸ’ ಚಿತ್ರ ತನ್ನ ಹಾಡುಗಳಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ಈ ಸಿನಿಮಾದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಈ ಚಿತ್ರದಲ್ಲಿ ನಟರಾಜ್ ಎಸ್ ಭಟ್ ಸೇರಿದಂತೆ ಮಹಾಲಕ್ಷ್ಮಿ, ಮಂಜಮ್ಮ ಜೋಗತಿ, ಹನುಮಕ್ಕ, ಅನಿಕಾ ರಮ್ಯಾ, ಮಂಜು ಗೌಡ, ಹುಲಿಗೆಪ್ಪ ಕಟ್ಟಿಮನಿ ಬಣ್ಣ ಹಚ್ಚಿದ್ದು, ವಿ ಶೋಭಾ ಸಿನೆಮಾಸ್ ಬ್ಯಾನರ್ ನಲ್ಲಿ ವಿ ಶೋಭಾ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಕಿಟ್ಟು ಸಂಕಲನ,  ಚೇತನ್ ಶರ್ಮ ಛಾಯಾಗ್ರಾಹಣ, ಹಾಗೂ ರಘು ರಾಮ್ ಚರಣ್ ಅವರ ಸಾಹಸ ನಿರ್ದೇಶನವಿದೆ. ಪ್ರದೀಪ್ ಚಂದ್ರ ಸಂಗಿತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular