HomeEntertainment'ಕುಬುಸ' ಚಿತ್ರದ ವಿಡಿಯೋ ಸಾಂಗ್ ರಿಲೀಸ್

‘ಕುಬುಸ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ರಘುರಾಮ್ ಚರಣ್ ಆಕ್ಷನ್ ಕಟ್ ಹೇಳಿರುವ ‘ಕುಬುಸ’ ಚಿತ್ರದ ವಿಡಿಯೋ ಹಾಡನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗಿದ್ದು, ನಟ ದುನಿಯಾ ವಿಜಯ್ ಅವರ ಕೈಯಲ್ಲಿ ಈ ಹಾಡನ್ನು  ಲಾಂಚ್ ಮಾಡಿಸಲಾಗಿದೆ. ‘ಅರೆರೆ ಅರೆರೆ ತಂಗಾಳಿಯ’ ಎಂಬ ಈ ಹಾಡಿಗೆ ವಾಸುಕಿ ವೈಭವ್ ಧ್ವನಿಯಾಗಿದ್ದು, ಪ್ರದೀಪ್ ಚಂದ್ರ ಅವರ ಸಂಗೀತ ಹಾಗೂ ಸಾಹಿತ್ಯವಿದೆ.

ಈ ಚಿತ್ರದಲ್ಲಿ ನಟರಾಜ ಎಸ್ ಭಟ್ ಸೇರಿದಂತೆ ಮಹಾಲಕ್ಷ್ಮಿ, ಮಂಜಮ್ಮ ಜೋಗತಿ, ಹನುಮಕ್ಕ, ಅನಿಕಾ ರಮ್ಯಾ, ಮಂಜು ಗೌಡ , ಹುಲಿಗೆಪ್ಪ ಕಟ್ಟಿಮನಿ. ತೆರೆ ಹಂಚಿಕೊಂಡಿದ್ದು, ವಿ ಶೋಭಾ ತಮ್ಮ ವಿ ಶೋಭಾ ಸಿನೆಮಾಸ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಕಿಟ್ಟು ಸಂಕಲನ, ಚೇತನ್ ಶರ್ಮಾ ಛಾಯಾಗ್ರಾಹಣ, ಹಾಗೂ ರಘುರಾಮ್ ಚರಣ್ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular