HomeLatest NewsBig News: ಮಂಗಳೂರು-ಬೆಂಗಳೂರು ಕೆಎಸ್ಆರ್‌ಟಿಸಿ ಬಸ್ ದರ ಕಡಿತ

Big News: ಮಂಗಳೂರು-ಬೆಂಗಳೂರು ಕೆಎಸ್ಆರ್‌ಟಿಸಿ ಬಸ್ ದರ ಕಡಿತ

ಮಂಗಳೂರು-ಬೆಂಗಳೂರು ನಡುವೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಗುಡ್‌ನ್ಯೂಸ್. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಮಂಗಳೂರು-ಬೆಂಗಳೂರು ನಡುವಿನ ಬಸ್ ಪ್ರಯಾಣ ದರವನ್ನು ಸೋಮವಾರದಿಂದಲೇ ಜಾರಿಗೆ ಬರುವಂತೆ ಕಡಿತಗೊಳಿಸಿದ ಆದೇಶಿಸಿದೆ.

ಕೆಎಸ್ಆರ್‌ಸಿಟಿ ಮಂಗಳೂರು-ಬೆಂಗಳೂರು ನಡುವಿನ ಐಷಾರಾಮಿ ಬಸ್‌ಗಳ ಪ್ರಯಾಣ ದರವನ್ನು ಕಡಿತ ಮಾಡಿದೆ. ಜನವರಿ-ಮಾರ್ಚ್‌ ನಡುವಿನ ಅವಧಿಯಲ್ಲಿ ಸಂಚಾರ ನಡೆಸುವ ಜನರನ್ನು ಆಕರ್ಷಣೆ ಮಾಡಲು ಈ ದರ ಕಡಿತ ಮಾಡಲಾಗಿದೆ.

ಅತಿ ಹೆಚ್ಚು ಜನರು ಸಂಚಾರ ನಡೆಸುವ ಏಪ್ರಿಲ್-ಜೂನ್, ಅಕ್ಟೋಬರ್-ಡಿಸೆಂಬರ್ ತಿಂಗಳುಗಳಲ್ಲಿ ಕೆಎಸ್ಆರ್‌ಟಿಸಿ ಪ್ರಯಾಣ ದರವನ್ನು ಶೇ 10-15ರಷ್ಟು ಏರಿಕೆ ಮಾಡಲಿದೆ. ಈ ದರ ಪರಿಷ್ಕರಣೆ ವಾರಾಂತ್ಯದ ಪ್ರಯಾಣಕ್ಕೂ ಅನ್ವಯವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಷ್ಟು ಪ್ರಯಾಣ ದರ ಕಡಿತ?: ಪ್ರೀಮಿಯಂ ಮಾದರಿ ಬಸ್‌ಗಳಲ್ಲಿ ಮಂಗಳೂರು-ಬೆಂಗಳೂರು ನಡುವಿನ ಪ್ರಯಾಣ ದರವನ್ನು ಕಡಿತ ಮಾಡಲಾಗಿದೆ. ಅಂಬಾರಿ ಉತ್ಸವ್ ಮಲ್ಟಿ ಆಕ್ಸೆಲ್ ಎಸಿ ಬಸ್‌ನ ದರ 1,510 ರೂ. ಆಗಿದೆ. ಕುಂದಾಪುರ-ಬೆಂಗಳೂರು-ಕುಂದಾಪುರ ನಡುವಿನ ದರ 1,460 ರೂ. ಮತ್ತು ಉಡುಪಿ-ಬೆಂಗಳೂರು-ಉಡುಪಿ ಮಾರ್ಗದ ದರವು ಇಷ್ಟೇ ಆಗಿದೆ.

ಅಂಬಾರಿ ಡ್ರೀಮ್ ಕ್ಲಾಸ್ ಮತ್ತು ಮಂಗಳೂರು-ಬೆಂಗಳೂರು-ಮಂಗಳೂರು ಮಾರ್ಗದ ದರ 1,350 ರೂ. ಆಗಿದೆ. ಇತರ ಪ್ರೀಮಿಯಂ ಬಸ್‌ಗಳ ಪ್ರಯಾಣ ದರವನ್ನು 1,350 ರೂ.ಗಳಿಂದ 1,300  ಮತ್ತು 1,200 ರೂ.ಗಳಿಗೆ ಇಳಿಕೆ ಮಾಡಲಾಗಿದೆ.

ಕುಂದಾಪುರ-ಬೆಂಗಳೂರು ಮಾರ್ಗದಲ್ಲಿ ಮಲ್ಟಿ ಆಕ್ಸೆಲ್ 2 ಎಸಿ ಬಸ್‌ಗಳ ದರವನ್ನು 1,310 ರಿಂದ 1,250 ರೂ. ಮತ್ತು ಉಡುಪಿ-ಬೆಂಗಳೂರು-ಉಡುಪಿ ಮಾರ್ಗದ ದರವನ್ನು 1,150ಕ್ಕೆ ಇಳಿಕೆ ಮಾಡಲಾಗಿದೆ.

ಬೆಂಗಳೂರು-ಮಂಗಳೂರು-ಮಂಗಳೂರು ಮಾರ್ಗದ  ಕುಳಿತು ಸಾಗುವ ಮಲ್ಟಿ ಆಕ್ಸೆಲ್ ಬಸ್ ಪ್ರಯಾಣ ದರವನ್ನು 1,110, 1,060 ಮತ್ತು 1000 ರೂ.ಗಳಿಗೆ ಕಡಿತಗೊಳಿಸಲಾಗಿದೆ. ಸೋಮವಾರದಿಂದಲೇ ಈ ದರಗಳು ಜಾರಿಗೆ ಬಂದಿವೆ.

ನಾನ್ ಎಸಿ ಬಸ್‌ಗಳು: ನಾನ್ ಎಸಿ ಬಸ್‌ಗಳ ದರಗಳನ್ನು ಸಹ ಕಡಿತಗೊಳಿಸಲಾಗಿದೆ. ನಾನ್ ಎಸಿ ಸ್ಲೀಪರ್ ಕೋಚ್‌ಗಳ ದರವನ್ನು 1050, 1000 ಮತ್ತು 900 ರೂ.ಗಳಿಗೆ ಕಡಿತ ಮಾಡಲಾಗಿದೆ.

ಪಲ್ಲಕ್ಕಿ ನಾನ್ ಎಸಿ ಬಸ್ ದರ 1,110, 1060 ಮತ್ತು 950ಕ್ಕೆ ಇಳಿಕೆ ಮಾಡಲಾಗಿದೆ. ರಾಜಹಂಸ ಬಸ್, ನಾನ್ ಎಸಿ ಸಿಟ್ಟಿಂಗ್ ಬಸ್ ದರವನ್ನು 750, 700 ಮತ್ತು 650 ರೂ.ಗಳಿಗೆ ಇಳಿಕೆ ಮಾಡಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ದರಗಳನ್ನು ಕಡಿತ ಮಾಡಲಾಗಿದ್ದು, ಜನರು ಸಂಚಾರಕ್ಕೆ ಹೆಚ್ಚಾಗಿ ಕೆಎಸ್ಆರ್‌ಟಿಸಿ ಬಸ್‌ಗಳನ್ನು ಬಳಕೆ ಮಾಡಬೇಕು ಎಂದು ಸಂಚಾರ ನಿಯಂತ್ರಕರು ಮನವಿ ಮಾಡಿದ್ದಾರೆ.

ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ಮಂಗಳೂರು, ಉಡುಪಿ ನಡುವೆ ಪ್ರತಿದಿನ ನೂರಾರು ಜನರು ಸಂಚಾರವನ್ನು ನಡೆಸುತ್ತಾರೆ. ಬಸ್, ವಿಮಾನ, ರೈಲು ಸಂಪರ್ಕವಿದೆ. ಆದರೆ ದರಗಳು ಹೆಚ್ಚಿರುವ ಕಾರಣ ಜನರಿಗೆ ಹೊರೆಯಾಗುತ್ತಿದೆ.

ಸಾಲು ಸಾಲು ರಜೆ ದಿನಗಳಲ್ಲಿ ಬೆಂಗಳೂರಿನಿಂದ ಕರಾವಳಿಗೆ ಸಂಚಾರ ನಡೆಸುವುದು ಕಷ್ಟವಾಗಿದೆ. ರೈಲು, ಬಸ್, ವಿಮಾನ ಯಾವುದರಲ್ಲಿಯೂ ಸೀಟುಗಳು ಸಿಗುವುದಿಲ್ಲ. ಇರುವ ಕೆಲವೇ ರೈಲುಗಳು ಸಂಪೂರ್ಣ ಭರ್ತಿಯಾಗಿರುತ್ತದೆ. ಆದ್ದರಿಂದ ಹೆಚ್ಚಿನ ರೈಲುಗಳನ್ನು ಓಡಿಸಬೇಕು ಎಂಬ ಬೇಡಿಕೆ ಇದೆ.

ಈ ಮಾರ್ಗದ ಖಾಸಗಿ ಬಸ್‌ಗಳು ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತವೆ. ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಸಹ ದರಗಳು ಅಧಿಕವಾಗಿದ್ದವು. ಈಗ ದರ ಕಡಿತ ಮಾಡಿದ್ದು ಜನರಿಗೆ ಅನುಕೂಲವಾಗಿದೆ. ಆದರೆ ಪುನಃ ಕೆಎಸ್ಆರ್‌ಟಿಸಿ ದರ ಹೆಚ್ಚಳ ಮಾಡುವುದು ಖಚಿತವಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular