ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಬಸ್‌ಗಳಲ್ಲಿ ಸಾಗಿಸುವ ಲಗೇಜ್‌ಗಳ ಶುಲ್ಕವನ್ನು ಹೆಚ್ಚಿಸಿದ್ದು, ಈ ಹೊಸ ದರಗಳು ಫೆಬ್ರವರಿ 16, 2026 ರಿಂದ ಜಾರಿಗೆ ಬಂದಿವೆ. ಡೀಸೆಲ್ ಬೆಲೆ ಏರಿಕೆ, ಸಿಬ್ಬಂದಿ ವೆತನ ಮತ್ತು ನಿರ್ವಹಣಾ ವೆಚ್ಚಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪ್ರಯಾಣಿಕರು ಈ ಹಿಂದಿನಂತೆಯೇ 30 ಕೆಜಿವರೆಗೆ ಲಗೇಜ್ ಅನ್ನು ಉಚಿತವಾಗಿ ಸಾಗಿಸಬಹುದು. ಹಳೆಯ ದರಗಳಿಗೆ ಹೋಲಿಸಿದರೆ ಸುಮಾರು ಶೇ. 15 ರಷ್ಟು ಏರಿಕೆ ಮಾಡಲಾಗಿದೆ.30 ಕೆಜಿಗಿಂತ ಹೆಚ್ಚಿನ ತೂಕದ ಲಗೇಜ್‌ಗೆ ಪ್ರಯಾಣದ ದೂರ ಮತ್ತು ಸ್ಟೇಜ್‌ಗಳ ಆಧಾರದ ಮೇಲೆ ಪ್ರತಿ ಕೆಜಿಗೆ 6 ರೂಪಾಯಿಯಿಂದ 145 ರೂಪಾಯಿವರೆಗೆ ಶುಲ್ಕ ವಿಧಿಸಲಾಗುತ್ತದೆ.
ಹೆಚ್ಚಳದ ಪ್ರಮಾಣ: ಹಳೆಯ ದರಗಳಿಗೆ ಹೋಲಿಸಿದರೆ ಸುಮಾರು ಶೇ. 15 ರಷ್ಟು ಏರಿಕೆ ಮಾಡಲಾಗಿದೆ. ಜನವರಿ 2025 ರಲ್ಲಿ ಬಸ್ ಪ್ರಯಾಣ ದರ ಏರಿಕೆಯಾದಾಗ ಲಗೇಜ್ ದರ ಪರಿಷ್ಕರಿಸಿರಲಿಲ್ಲ, ಆದ್ದರಿಂದ ಈಗ ಈ ಬದಲಾವಣೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಕೊನೆಯದಾಗಿ 2021ರ ಡಿಸೆಂಬರ್‌ನಲ್ಲಿ ಲಗೇಜ್ ದರ ಪರಿಷ್ಕರಣೆಯಾಗಿತ್ತು.
ಯಾವ ವಸ್ತುಗಳನ್ನು ಸಾಗಿಸಬಹುದು ? ಬಸ್‌ನಲ್ಲಿ ಲಭ್ಯವಿರುವ ಸ್ಥಳಾವಕಾಶಕ್ಕೆ ಅನುಗುಣವಾಗಿ ಈ ಕೆಳಗಿನ ವಸ್ತುಗಳ ಸಾಗಾಟಕ್ಕೆ ಅವಕಾಶವಿದೆ:
- ವಾಶಿಂಗ್ ಮಷೀನ್, ಫ್ರಿಜ್ ಮತ್ತು ಗೃಹೋಪಯೋಗಿ ಪಾತ್ರೆಗಳು.
- ಟ್ರಕ್ ಟೈರ್, ಅಲ್ಯೂಮಿನಿಯಂ ಮತ್ತು ಕಬ್ಬಿಣದ ಪೈಪ್‌ಗಳು.
- ಸಾಕು ಪ್ರಾಣಿಗಳಾದ ಬೆಕ್ಕು, ನಾಯಿ ಮತ್ತು ಮೊಲಗಳನ್ನು ಸಹ ನಿಗದಿಪಡಿಸಿದ ಶುಲ್ಕ ಪಾವತಿಸಿ ಸಾಗಿಸಬಹುದು.
ದರ ನಿರ್ಧಾರ: ಕೆಎಸ್‌ಆರ್‌ಟಿಸಿಯಲ್ಲಿ ಒಂದು ಸ್ಟೇಜ್ ಎಂದರೆ ಸುಮಾರು 6 ಕಿಲೋಮೀಟರ್ ಎಂದು ಪರಿಗಣಿಸಲಾಗುತ್ತದೆ. ಪ್ರಯಾಣಿಕರು ಕ್ರಮಿಸುವ ಒಟ್ಟು ಸ್ಟೇಜ್‌ಗಳ ಆಧಾರದ ಮೇಲೆ ಹೆಚ್ಚುವರಿ ಲಗೇಜ್ ಶುಲ್ಕವನ್ನು ಲೆಕ್ಕ ಹಾಕಲಾಗುತ್ತದೆ.
| ಸ್ಟೇಜ್ಗಳು | ಹೊಸ ದರ (ರೂ.) |
| 1 ರಿಂದ 5 ಸ್ಟೇಜ್ | ₹6 |
| 6 ರಿಂದ 10 ಸ್ಟೇಜ್ | ₹12 |
| 11 ರಿಂದ 15 ಸ್ಟೇಜ್ | ₹20 |
| 16 ರಿಂದ 20 ಸ್ಟೇಜ್ | ₹25 |
| 21 ರಿಂದ 50 ಸ್ಟೇಜ್ | ₹28 ರಿಂದ ₹50 ವರೆಗೆ |
| 156 ರಿಂದ 160 ಸ್ಟೇಜ್ | ₹145 |

