HomeKarnatakaBIG NEWS: ಏಕಾಏಕಿ ತುಂಡಾಗಿ ಕಳಚಿ ಬಿದ್ದ ಚಲಿಸುತ್ತಿದ್ದ KSRTC ಬಸ್ ಚಕ್ರಗಳು

BIG NEWS: ಏಕಾಏಕಿ ತುಂಡಾಗಿ ಕಳಚಿ ಬಿದ್ದ ಚಲಿಸುತ್ತಿದ್ದ KSRTC ಬಸ್ ಚಕ್ರಗಳು

ಹಾಸನ: ಚಲಿಸುತ್ತಿದ್ದ ಸರ್ಕಾರಿ ಬಸ್ ನ ಚಕ್ರಗಳು ಏಕಾಏಕಿ ತುಂದಾಗಿ ಬಿದ್ದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

ಕೆ.ಎಸ್.ಆರ್.ಟಿ.ಸಿ ಬಸ್ ಸಕಲೇಶಪುರದಿಂದ ಬೇಲೂರಿಗೆ ತೆರಳುತ್ತಿತ್ತು. ಈ ವೇಳೆ ಬಸ್ ನ ಚಕ್ರಗಳು ಏಕಾಏಕಿ ತುಂಡಾಗಿ ಕಳಚಿ ಬಿದ್ದಿವೆ. ಚಕ್ರಗಳು ಕಳಚುತ್ತಿದ್ದಂತೆ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ತಕ್ಷಣ ಚಾಲಕ ಬಸ್ ನಿಲ್ಲಿಸಿದ್ದಾರೆ.

ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular