HomeKarnatakaBIG NEWS: KSRP ಹೆಡ್ ಕಾನ್ಸ್ ಟೇಬಲ್ ಪ್ರವಾಸಿ ಮಂದಿರದಲ್ಲಿ ಶವವಾಗಿ ಪತ್ತೆ

BIG NEWS: KSRP ಹೆಡ್ ಕಾನ್ಸ್ ಟೇಬಲ್ ಪ್ರವಾಸಿ ಮಂದಿರದಲ್ಲಿ ಶವವಾಗಿ ಪತ್ತೆ

ಹಾಸನ: ಪ್ರವಾಸಿ ಮಂದಿರದಲ್ಲಿ ಕೆ.ಎಸ್.ಆರ್.ಪಿ ಹೆಡ್ ಕಾನ್ಸ್ ಟೇಬಲ್ ಓರ್ವರು ಶವವಾಗಿ ಪತ್ತೆಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.

51 ವರ್ಷದ ರಾಜೇಂದ್ರ ಮೃತ ಹೆಡ್ ಕಾನ್ಸ್ ಟೇಬಲ್. ರಾಜೇಂದ್ರ ಕೆ.ಎಸ್.ಆರ್.ಪಿ 11ನೇ ಬೆಟಾಲಿಯನ್ ನ ಹೆಡ್ ಕಾನ್ಸ್ ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಏಕಾಏಕಿ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಸನದ ಎನ್.ಆರ್.ವೃತ್ತದ ಬಳಿ ಇರುವ ಪ್ರವಾಸಿ ಮಂದಿರದಲ್ಲಿ ರಾತ್ರಿ ವೇಳೆ ಮೆಟ್ಟಿಲು ಇಳಿಯುವಾಗ ಕಾಲು ಜಾರಿ ಬಿದ್ದು ತಲೆಗೆ ಬಲವಾದ ಪೆಟ್ಟಾಗಿ ಅಥವಾ ಕೆಳಗೆ ಬಿದ್ದಾಗ ಹೃದಯಾಘತದಿಂದ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular