HomeEntertainmentಕೂದಲಿನ ಜೊತೆ ಹೊಸ ಪ್ರಯೋಗ ಮಾಡಲು ನನಗೆ ತುಂಬಾ ಇಷ್ಟ: ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ನಟಿ...

ಕೂದಲಿನ ಜೊತೆ ಹೊಸ ಪ್ರಯೋಗ ಮಾಡಲು ನನಗೆ ತುಂಬಾ ಇಷ್ಟ: ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ನಟಿ ಕೃತಿ ಸನೋನ್

ಬಾಲಿವುಡ್ ಸ್ಟಾರ್ ಕರೀನಾ ಕಪೂರ್ ಖಾನ್ ಅವರ ಜನಪ್ರಿಯ ಟಾಕ್ ಶೋ ‘ವಾಟ್ ವುಮೆನ್ ವಾಂಟ್’ ಆರನೇ ಸೀಸನ್‌ನ ಎರಡನೇ ಸಂಚಿಕೆಯಲ್ಲಿ ನಟಿ ಕೃತಿ ಸನೋನ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರು ನಟಿಯರು ಸಿನಿಮಾಗಳು, ಪಾತ್ರಗಳು ಹಾಗೂ ತಮ್ಮ ವೈಯಕ್ತಿಕ ಜೀವನದ ಹಲವು ರೋಚಕ ವಿಚಾರಗಳ ಬಗ್ಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಅದರಲ್ಲೂ ಕೃತಿ ಸನೋನ್ ತಮ್ಮ ನೆಚ್ಚಿನ ಹೇರ್‌ಸ್ಟೈಲ್ ಹಾಗೂ ಕೂದಲು ಕತ್ತರಿಸುವ ಹುಚ್ಚಿನ ಬಗ್ಗೆ ಮಜವಾಗಿ ಮಾತನಾಡಿದ್ದು ಈಗ ಎಲ್ಲರ ಗಮನ ಸೆಳೆದಿದೆ.

ಶೋನ ವಿಶೇಷ ಸೆಗ್ಮೆಂಟ್‌ನಲ್ಲಿ ಕರೀನಾ ಕಪೂರ್ ಅವರು ಕೃತಿಗೆ ಉದ್ದ ಅಥವಾ ತುಂಡು, ನೇರ ಅಥವಾ ಅಲೆಅಲೆಯಾದ (wavy) ಕೂದಲು ಎಂದರೆ ಇಷ್ಟ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೃತಿ, ನನಗೆ ಅಲೆಅಲೆಯಾದ ಕೂದಲು ತುಂಬಾ ಇಷ್ಟ ಹಾಗೂ ನನ್ನ ಕೂದಲಿನೊಂದಿಗೆ ಹೊಸ ಪ್ರಯೋಗಗಳನ್ನು ಮಾಡಲು ನಂಗೆ ಎಲ್ಲಿಲ್ಲದ ಉತ್ಸಾಹ ಎಂದಿದ್ದಾರೆ. ನನಗೆ ಬೇಗನೆ ನನ್ನ ಹೇರ್‌ಸ್ಟೈಲ್ ಬಗ್ಗೆ ಬೇಸರವಾಗುತ್ತದೆ. ಸಿನಿಮಾ ಶೂಟಿಂಗ್ ಇಲ್ಲದ ಸಂದರ್ಭದಲ್ಲಿ ಒಮ್ಮೆ ಏಕಾಏಕಿ ಬ್ಯಾಂಗ್ಸ್ ಸ್ಟೈಲ್‌ನಲ್ಲಿ ಕೂದಲು ಕತ್ತರಿಸಿಕೊಂಡಿದ್ದೆ. ಇದನ್ನು ನೋಡಿ ನಿರ್ದೇಶಕರು ಶಾಕ್ ಆಗಿದ್ದರು ಎಂದು ಹಳೆಯ ಘಟನೆಯನ್ನು ಮೆಲುಕು ಹಾಕಿದರು.

ಇದೇ ವೇಳೆ ಮುಂಬರುವ ‘ಕಾಕ್‌ಟೇಲ್ 2’ ಸಿನಿಮಾದಲ್ಲಿ ತಮ್ಮ ಹೊಸ ಗ್ಲಾಮರ್ ಪಾತ್ರ ಹಾಗೂ ಬಿಕಿನಿ ದೃಶ್ಯದಲ್ಲಿ ನಟಿಸಿದ ಅನುಭವದ ಬಗ್ಗೆಯೂ ಕೃತಿ ಮಾತನಾಡಿದರು. ತಮ್ಮ ಹನ್ನೆರಡು ವರ್ಷಗಳ ಚಲನಚಿತ್ರ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಬಿಕಿನಿ ಧರಿಸಿ ನಟಿಸಿರುವುದಾಗಿ ಅವರು ತಿಳಿಸಿದರು. ದೇಹದ ಫಿಟ್‌ನೆಸ್ ಗಿಂತ ಮುಖ್ಯವಾಗಿ ನಮ್ಮ ಮೈಯ ಚರ್ಮದೊಂದಿಗೆ ನಾವು ಎಷ್ಟು ಆರಾಮದಾಯಕವಾಗಿದ್ದೇವೆ ಎಂಬುದು ಮುಖ್ಯ. ಈಗ ನನಗೆ ನನ್ನ ಬಗ್ಗೆ ಆತ್ಮವಿಶ್ವಾಸ ಬಂದಿರುವುದರಿಂದ ಈ ಪಾತ್ರವನ್ನು ಒಪ್ಪಿಕೊಂಡೆ ಎಂದು ಕೃತಿ ಸ್ಪಷ್ಟಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular