HomeIPL 2026ರಿಂಕು ಸಿಂಗ್ 5 ಎಸೆತಕ್ಕೆ 5 ಸಿಕ್ಸರ್ ಬಾರಿಸಿ ವರ್ಷಗಳಾಯಿತು, ನಂತರ ಆತ ಏನನ್ನೂ ಮಾಡಿಲ್ಲ;...

ರಿಂಕು ಸಿಂಗ್ 5 ಎಸೆತಕ್ಕೆ 5 ಸಿಕ್ಸರ್ ಬಾರಿಸಿ ವರ್ಷಗಳಾಯಿತು, ನಂತರ ಆತ ಏನನ್ನೂ ಮಾಡಿಲ್ಲ; ವಿಶ್ವಕಪ್ ವಿಜೇತ ಕ್ರಿಕೆಟಿಗನ ಕಿಡಿ

ರಿಂಕು ಸಿಂಗ್.. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಪ್ರತಿಭಾ ಪ್ರದರ್ಶನದ ವೇದಿಕೆಯಾಗಿ ಬಳಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಯಶಸ್ವಿ ಕ್ರಿಕೆಟಿಗರಲ್ಲಿ ಒಬ್ಬರು.

ಇತ್ತೀಚೆಗೆ ನಡೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲೂ ಸಹ ಭಾಗವಹಿಸಿದ್ದ ರಿಂಕು ಸಿಂಗ್ ಮುನ್ನೆಲೆಗೆ ಬಂದದ್ದು 2023ರ ಐಪಿಎಲ್‌ನ 13ನೇ ಪಂದ್ಯದಲ್ಲಿ. ಗುಜರಾತ್ ಟೈಟನ್ಸ್ ವಿರುದ್ಧ ಗೆಲ್ಲಲು ಕೊಲ್ಕತ್ತಾ ನೈಟ್ ರೈಡರ್ಸ್ ಕೊನೆಯ ಐದು ಎಸೆತಗಳಲ್ಲಿ 28 ರನ್ ಬೇಕಿದ್ದಾಗ ರಿಂಕು ಸಿಂಗ್ ಯಶ್ ದಯಾಳ್‌ಗೆ ಸತತ ಐದು ಸಿಕ್ಸರ್ ಬಾರಿಸುವ ಮೂಲಕ ಪಂದ್ಯ ಗೆಲ್ಲಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಈ ಒಂದು ಇನ್ನಿಂಗ್ಸ್ ರಿಂಕು ಸಿಂಗ್ ಮಾತ್ರವಲ್ಲದೇ ಕ್ರಿಕೆಟ್ ಜಗತ್ತಿಗೆ ವಿಶೇಷವೆನಿಸಿದ್ದು, ಇದರಿಂದ ಈಗಲೂ ರಿಂಕು ಸಿಂಗ್ ಚರ್ಚೆಗೀಡಾಗಿ ಪ್ರಶಂಸೆ ಗಿಟ್ಟಿಸಿಕೊಳ್ಳುತ್ತಾ ಇರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಇದೀಗ ಈ ಪಂದ್ಯವನ್ನು ಉಲ್ಲೇಖಿಸಿ ರಿಂಕು ಸಿಂಗ್‌ ಕುರಿತು 1983ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ ಕ್ರಿಸ್ ಶ್ರೀಕಾಂತ್ ಮಾತನಾಡಿದ್ದಾರೆ.

‘ರಿಂಕು ಸಿಂಗ್ ಸ್ಪೋಟಕ ಆಟಗಾರನಲ್ಲ. ಆತ ಐದು ಎಸೆತಕ್ಕೆ ಐದು ಸಿಕ್ಸರ್ ಬಾರಿಸಿ ವರ್ಷಗಳಾಗಿವೆ ಹಾಗೂ ನಾವು ಅದರ ಬಗ್ಗೆ ಈಗಲೂ ಮಾತನಾಡುತ್ತಿದ್ದೇವೆ. ಅತ ಸ್ಟ್ರೈಕ್ ಬದಲಿಸುತ್ತಾ ಆಟ ಆಡುವಷ್ಟು ನಿಪುಣನಾಗಿದ್ದಾನೆ ನಿಜ. ಆದರೆ ಬಾರಿಸಬೇಕಾದ ರನ್ ರೇಟ್ 10 ಅಥವಾ 12ಕ್ಕಿಂತ ಹೆಚ್ಚಿದ್ದಾಗ ಆತ ಕಷ್ಟಪಡುತ್ತಾನೆ. ಆತನ ಕೈನಲ್ಲಿ ಸಾಧ್ಯವಿಲ್ಲ’ ಎಂದು ಶ್ರೀಕಾಂತ್ ಕಾಮೆಂಟ್ ಮಾಡಿದ್ದಾರೆ.

ಇನ್ನೂ ಮುಂದುವರಿದು ಮಾತನಾಡಿದ ಕ್ರಿಸ್ ಶ್ರೀಕಾಂತ್ ‘ಆತ ಏಳನೇ ಕ್ರಮಾಂಕದಲ್ಲಿ ಆಡುವುದು ಸೂಕ್ತ. ಕೊನೆಯ ಐದು ಓವರ್‌ಗಳಲ್ಲಿ 50 ರನ್ ಬೇಕಿದ್ದಾಗ ಆತ ಚೇಸ್ ಮಾಡಬಲ್ಲ. ಆತನಿಗೆ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ನೀಡಬಾರದು. ಅದು ಕೆಲಸ ಮಾಡುವುದಿಲ್ಲ’ ಎಂದಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular