ಬೆಂಗಳೂರು: ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ಹೊಸ ಆಸ್ಪತ್ರೆಗಳನ್ನು ನೋಂದಾಯಿಸಿಕೊಳ್ಳುವಾಗ ಅಥವಾ ನೋಂದಾಯಿತ ಆಸ್ಪತ್ರೆಯನ್ನು ನವೀಕರಿಸುವಾಗ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ(KPME)ಯಿಂದ ಮಾನ್ಯತೆ ಹೊಂದಿರುವ ನೋಂದಾಯಿತ ಪ್ರಮಾಣ ಪತ್ರವನ್ನು ಪರಿಗಣಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.
ಸುವರ್ಣ ಆರೋಗ್ಯ ಟ್ರಸ್ಟ್ ನಡಿ ಹೊಸ ಆಸ್ಪತ್ರೆಗಳನ್ನು ಎಂಪಾನೆಲ್ ಮಾಡುವಾಗ ಅಥವಾ ನವೀಕರಿಸುವಾಗ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ(ಕೆಪಿಎಂಇ)ಯಿಂದ ಮಾನ್ಯತೆಯ ಪ್ರಮಾಣ ಪತ್ರ ಪರಿಗಣಿಸುವುದು ಕಡ್ಡಾಯವೆಂದು ಆದೇಶ ಹೊರಡಿಸಲಾಗಿದೆ.
ಈ ಮೂಲಕ ಕಾನೂನು ಬದ್ಧವಾಗಿರುವ ಆಸ್ಪತ್ರೆಗಳನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನೆಟ್ವರ್ಕ್ ಆಸ್ಪತ್ರೆಗೆ ಸೇರಿಸಲು ಸಹಕಾರಿಯಾಗುತ್ತದೆ. ಆಡಳಿತಾತ್ಮಕವಾಗಿ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಸಹಕಾರಿಯಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.


