HomeKarnatakaಚಲಿಸುತ್ತಿದ್ದ ಬಸ್ ಟೈರ್ ಸ್ಫೋಟ: ಚಾಲಕನ ಸಮಯಪ್ರಜ್ಞೆಯಿಂದ ಬಚಾವ್ ಆದ 20 ಪ್ರಯಾಣಿಕರು

ಚಲಿಸುತ್ತಿದ್ದ ಬಸ್ ಟೈರ್ ಸ್ಫೋಟ: ಚಾಲಕನ ಸಮಯಪ್ರಜ್ಞೆಯಿಂದ ಬಚಾವ್ ಆದ 20 ಪ್ರಯಾಣಿಕರು

ಗಂಗಾವತಿ: ಚಲಿಸುತ್ತಿದ್ದ ಕೆ.ಎಸ್.ಆರ‍್.ಟಿ.ಸಿ ಬಸ್ ಟೈರ್ ಸ್ಫೋಟಗೊಂಡ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ದಾಸನಾಳದ ಹೊರವಲಯದಲ್ಲಿ ನಡೆದಿದೆ.

ಚಲಿಸುತ್ತಿದ್ದ ಬಸ್ ನ ಮುಂದಿನ ಟೈರ್ ಏಕಾಏಕ್ ಬ್ಲಾಸ್ಟ್ ಆಗಿದೆ. ನಿಯಂತ್ರಣ ಕಳೆದುಕೊಂಡ ಬಸ್ ಅಡ್ಡಾದಿಡ್ಡಿಯಾಗಿ ಚಲಿಸಲಾರಂಭಿಸಿದೆ. ಆದಾಗ್ಯೂ ಹೆದರದ ಚಾಲಕ ತಕ್ಷಣ ಬಸ್ ನಿಯಂತ್ರಣಕ್ಕೆ ತಂದು ನಿಲ್ಲಿಸಿದ್ದಾರೆ. ಚಾಲಕ ಮಂಜುನಾಥ್ ಅವರ ಸಮಯಪ್ರಜ್ಞೆಯಿಂದ ಬಸ್ ನಲ್ಲಿದ್ದ 20 ಪ್ರಯಾಣಿಕರು ಪಾರಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular