HomeLatest Newsಬುರ್ಖಾ ಧರಿಸಿ ಬಂದು ಅಂಗಡಿಯಲ್ಲಿದ್ದ ಗೃಹಬಳಕೆ ವಸ್ತುಗಳನ್ನು ಕದ್ದು ಪರಾರಿಯಾದ ಮಹಿಳೆ!

ಬುರ್ಖಾ ಧರಿಸಿ ಬಂದು ಅಂಗಡಿಯಲ್ಲಿದ್ದ ಗೃಹಬಳಕೆ ವಸ್ತುಗಳನ್ನು ಕದ್ದು ಪರಾರಿಯಾದ ಮಹಿಳೆ!

ಕೊಪ್ಪಳ: ಮಹಿಳೆಯೊಬ್ಬರು ಬುರ್ಖಾ ದರಿಸಿ ಬಂದು ಅಂಗಡಿಯಲ್ಲಿ ಕಳ್ಳತನ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದಿದೆ.

ಕಾರಟಗಿಯ ವಿಎ ಬಜಾರ್ ನಲ್ಲಿ ಈ ಘಟನೆ ನಡೆದಿದೆ. ಬುರ್ಖಾ ಧರಿಸಿ ಬಂದ ಮಹಿಳೆ ಬಜಾರ್ ನಲ್ಲಿದ್ದ ಗೃಹಬಳಕೆ ವಸ್ತುಗಳನ್ನು ಒಂದೊಂದಾಗಿ ಕಳ್ಳತನ ಮಾಡಿದ್ದಾಳೆ. ಕಳ್ಳಿಯ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂಗಡಿಯಲ್ಲಿದ್ದ ಗೃಹಬಳಕೆ ವಸ್ತುಗಳು, ಆಹಾರ ಸಾಮಗ್ರಿಗಳನ್ನು ತನ್ನ ಬಟ್ಟೆಯೊಳಗೆ ಸೇರಿಸಿಕೊಂಡು. ಸ್ಥಳದಿಂದ ಕಾಲ್ಕಿತ್ತಿದ್ದಾಳೆ. ಸುಮಾರು 20 ಸಾವಿರ ರೂಪಾಯಿ ಮೌಲ್ಯದ ಆಹಾರ ಸಾಮಗ್ರಿಗಳು ಕಳ್ಳತನವಾಗಿದೆ. ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಅಗಲೇ ಘಟನೆ ಬೆಳಕಿಗೆ ಬಂದಿದ್ದು, ಅಂಗಡಿ ಮಾಲಿಕ ಶಾಕ್ ಆಗಿದ್ದಾರೆ.

ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular