BIG NEWS: ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಅಪಾಯಕಾರಿ ಸಸ್ಯ ಶಿಲೀಂದ್ರ ಸೋಂಕು ಕೋಲ್ಕತ್ತಾ ಮೂಲದ ವ್ಯಕ್ತಿಯಲ್ಲಿ ಪತ್ತೆ

ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಅಪಾಯಕಾರಿ ಸಸ್ಯ ಶಿಲೀಂದ್ರ ಸೋಂಕು ಭಾರತದಲ್ಲಿ ದೃಢಪಟ್ಟಿದ್ದು ಕೊಲ್ಕತ್ತಾ ಮೂಲದ ವ್ಯಕ್ತಿ ಮೊದಲ ಸಂತ್ರಸ್ತರಾಗಿದ್ದಾರೆ. ವಿಶ್ವದಲ್ಲೇ ಅಪರೂಪದ ಮಾರಕ ಸಸ್ಯ ಶಿಲೀಂದ್ರ ಸೋಂಕು ಇದಾಗಿದ್ದು ಆತಂಕ ಹೆಚ್ಚಿಸಿದೆ.

ಕೋಲ್ಕತ್ತಾ ನಿವಾಸಿಯಾದ ಈ 61 ವರ್ಷದ ವ್ಯಕ್ತಿ ಸೋಂಕಿಗೆ ಗುರಿಯಾಗಿದ್ದಾರೆ. ಸಸ್ಯ ಶಿಲೀಂಧ್ರಗಳೊಂದಿಗೆ ನಿಕಟ ಸಂಪರ್ಕದಲ್ಲಿ ಕೆಲಸ ಮಾಡುವಾಗ ಸಸ್ಯ ರೋಗಕಾರಕಗಳು ಮನುಷ್ಯರೊಳಗೆ ಪ್ರವೇಶಿಸುತ್ತವೆ.

ಮಾಧ್ಯಮ ವರದಿಗಳ ಪ್ರಕಾರ ಸಂತ್ರಸ್ತ ವ್ಯಕ್ತಿ ಸಸ್ಯ ಮೈಕಾಲಜಿಸ್ಟ್ ಆಗಿದ್ದಾರೆ. ಅವರು ಕೋಲ್ಕತ್ತಾದ ಅಪೊಲೊ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಮೂರು ತಿಂಗಳ ಕಾಲ ಕೆಮ್ಮು, ಧ್ವನಿಯ ಕರ್ಕಶತೆ, ಪುನರಾವರ್ತಿತ ಫಾರಂಜಿಟಿಸ್, ಆಯಾಸ, ನುಂಗಲು ತೊಂದರೆ, ಗಂಟಲು ನೋವು ಮತ್ತು ಅನೋರೆಕ್ಸಿಯಾಗೆ ಚಿಕಿತ್ಸೆ ಪಡೆದಿದ್ದರು.

ವೈದ್ಯರ ಪ್ರಕಾರ ರೋಗಿಗೆ ಎಚ್ಐವಿ ಸೋಂಕು, ಮೂತ್ರಪಿಂಡದ ಕಾಯಿಲೆ ಅಥವಾ ಯಾವುದೇ ದೀರ್ಘಕಾಲದ ಕಾಯಿಲೆಯ ಇತಿಹಾಸವಿಲ್ಲ. ಅವರು ಯಾವುದೇ ರೋಗನಿರೋಧಕ ಔಷಧವನ್ನು ಸೇವಿಸುತ್ತಿರಲಿಲ್ಲ ಅಥವಾ ಯಾವುದೇ ಆಘಾತದಿಂದ ಬಳಲುತ್ತಿರಲಿಲ್ಲ.

ವೈದ್ಯರು ವ್ಯಕ್ತಿಯ ಎದೆಯ ಎಕ್ಸ್ ರೇ ಪರೀಕ್ಷಿಸಿದಾಗ ಅದು ಸಾಮಾನ್ಯವಾಗಿತ್ತು. ಆದಾಗ್ಯೂ ಅವರ CT ಸ್ಕ್ಯಾನ್ ನಲ್ಲಿ ಅವರ ಕುತ್ತಿಗೆಯಲ್ಲಿ ಪ್ಯಾರಾಟ್ರಾಶಿಯಲ್ ಬಾವು ಕಂಡುಬಂದಿತ್ತು. ವೈದ್ಯರು ಕೀವು ತೆಗೆದು ಶಿಲೀಂದ್ರ ಸೋಂಕನ್ನು ಉಲ್ಲೇಖಿಸಿ ವಿಶ್ವ ಆರೋಗ್ಯ ಸಂಸ್ಥೆಗೆ ಹೆಚ್ಚಿನ ಸಂಶೋಧನೆಗಾಗಿ ಕಳುಹಿಸಿದ್ದರು. ಅಲ್ಲಿ ಅವರು ಕೊಂಡ್ರೊಸ್ಟೀರಿಯಮ್ ಪರ್ಪ್ಯೂರಿಯಮ್ ಎಂದು ರೋಗನಿರ್ಣಯ ಮಾಡಿದರು.

ತಜ್ಞರ ಪ್ರಕಾರ, ಕೊಂಡ್ರೊಸ್ಟೆರಿಯಮ್ ಪರ್ಪ್ಯೂರಿಯಮ್ ಒಂದು ಶಿಲೀಂಧ್ರ ಸಸ್ಯ ರೋಗಕಾರಕವಾಗಿದೆ. ಇದನ್ನು ಸಾಮಾನ್ಯವಾಗಿ ನೇರಳೆ ಶಿಲೀಂಧ್ರ ಎಂದು ಕರೆಯಲಾಗುತ್ತದೆ. ಇದು ಮಾನವರಲ್ಲಿ ಸೋಂಕನ್ನು ಉಂಟುಮಾಡಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read