ಮಂಗಳೂರು: ನಿಷೇಧದ ನಡುವೆಯೂ ಕೋಳಿ ಕಾಳಗಕ್ಕೆ ಅವಕಾಶ ನೀಡುವಂತೆ ಕಾಂಗ್ರೆಸ್ ಶಾಸಕನೇ ಪಟ್ಟು ಹಿಡಿದು ಕುಳಿತಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ.
ಇಲ್ಲಿನ ಕೇಪು ಎಂಬಲ್ಲಿ ಈ ಘಟನೆ ನಡೆದಿದೆ. ವಿಟ್ಲ ಪೊಲೀಸರು ಕೋಳಿ ಅಂಕಕ್ಕೆ ನಿಷೇಧ ಹೇರಿದ್ದು, ಕೋಳಿ ಕಾಳಗ ಕಾನೂನು ಬಾಹಿರ ಹಿನ್ನೆಲೆಯಲ್ಲಿ ಬ್ಯಾನ್ ಮಾಡಲಾಗಿದೆ. ಆದರೆ ಪೊಲೀಸರ ಕ್ರಮ ಖಂಡಿಸಿ ವಿಟ್ಲ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ಕೋಳಿ ಕಾಳಗಕ್ಕೆ ಅವಕಾಶ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ.
ಕೇಪುವಿನಲ್ಲಿ ಬೆಂಬಲಿಗರ ಜೊತೆ ಸೇರಿ ಸ್ಥಳದಲ್ಲೇ ನಾನು ಬೀಡು ಬಿಡುತ್ತೇನೆ. ಇಲ್ಲಿಯೇ ಕೋಳಿ ಅಂಕಕ್ಕೆ ಅವಕಾಶ ಕೊಡಬೇಕು. ಇದೂ ಈ ಭಾಗದ ಧಾರ್ಮಿಕ ಆಚರಣೆಗಳಲ್ಲಿ ಒಂದು ಹಾಗಾಗಿ ಜನರ ಭಾವನೆಗೆ ಧಕ್ಕೆ ತರಬಾರದು. ಬಂಧಿಸುವುದಾದರೆ ನನ್ನನ್ನು ಬಂಧಿಸಿ. ಆದರೆ ಜನರ ಮೇಲೆ ಕೈ ಮಾಡುವಂತಿಲ್ಲ ಎಂದು ಪಟ್ಟು ಹಿಡಿದ್ದಾರೆ.
ಪೊಲೀಸರು ಶಾಸಕರು ಹಾಗೂ ಬೆಂಬಲಿಗರ ಮನವೊಲಿಕೆಗೆ ಯತ್ನಿಸಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

