HomeKarnatakaBREAKING: ಏಕಾಏಕಿ ಶಾಲೆಯ ಮೇಲ್ಛಾವಣಿ ಪ್ಲಾಸ್ಟಿಂಗ್ ಕುಸಿತ: ಶಿಕ್ಷಕಿಗೆ ಗಂಭೀರ ಗಾಯ

BREAKING: ಏಕಾಏಕಿ ಶಾಲೆಯ ಮೇಲ್ಛಾವಣಿ ಪ್ಲಾಸ್ಟಿಂಗ್ ಕುಸಿತ: ಶಿಕ್ಷಕಿಗೆ ಗಂಭೀರ ಗಾಯ

ಕೋಲಾರ: ಶಾಲೆಗಳು ಆರಂಭವಾಗುತ್ತಿದ್ದಂತೆ ಸರ್ಕಾರಿ ಶಾಲೆಗಳ ಅವಾಂತರಗಳು, ಅವ್ಯವಸ್ಥೆಗಳು ಒಂದೊಂದಾಗಿ ಹೊರಬರುತ್ತಿವೆ. ಸರ್ಕಾರಿ ಶಾಲೆಯ ಮೇಲ್ಚಾವಣಿ ಪ್ಲಾಸ್ಟಿಂಗ್ ಕುಸಿದು ಶಿಕ್ಷಕಿ ಗಾಯಗೊಂಡಿರುವ ಘಟನೆ ಕೋಲಾರ ನಗರದ ಹಳೆಯ ಮಾಧ್ಯಮಿಕ ಶಾಲೆಯಲ್ಲಿ ನಡೆದಿದೆ.

ಘಟನೆಯಲ್ಲಿ ಶಿಕ್ಷಕಿ ಯಶೋಧಾಗೆ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಾಠ ಮಾಡುವಾಗ ಶಿಕ್ಷಕಿ ಮೇಲೆ ಪ್ಲಾಸ್ಟಿಂಗ್ ಸಿಮೆಂಟ್ ಕುಸಿದುಬಿದ್ದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇತ್ತೀಚಿಗಷ್ಟೇ 25 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ದುರಸ್ತಿ ಮಾಡಲಾಗಿತ್ತು. ಆದರೂ ಶಾಲಾ ಕೊಠಡಿಯ ಮೇಲ್ಚಾವಣಿಯ ಪ್ಲಾಸ್ಟಿಂಗ್ ಕುಸಿತವಾಗಿದ್ದು, ಕಳಪೆ ಕಾಮಗಾರಿಯಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಶಾಲೆಯ ಮೇಲ್ಛಾವಣಿ ಪ್ಲಾಸಿಂಟ್ ಕುಸಿತದಿಂದಾಗಿ ವಿದ್ಯಾರ್ಥಿಗಳು, ಜೀವಭಯದಲ್ಲೇ ಪಾಠ ಕೇಳಬೇಕಾದ ಸ್ಥಿತಿ, ಶಿಕ್ಷಕರಿಗೆ ಜೀವ ಭಯದಲ್ಲೇ ಪಾಠಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular