HomeLatest NewsBIG NEWS: ಮದುವೆ ಮಂಟಪದಿಂದಲೇ ರೌಡಿಶೀಟರ್ ನನ್ನು ಸಿನಿಮಾ ಸ್ಟೈಲ್ ನಲ್ಲಿ ಎಳೆದೊಯ್ದ ಪೊಲೀಸರು

BIG NEWS: ಮದುವೆ ಮಂಟಪದಿಂದಲೇ ರೌಡಿಶೀಟರ್ ನನ್ನು ಸಿನಿಮಾ ಸ್ಟೈಲ್ ನಲ್ಲಿ ಎಳೆದೊಯ್ದ ಪೊಲೀಸರು

ಕೋಲಾರ: ಮಗಳ ಮದುವೆ ಖರ್ಚಿಗಾಗಿ ಉದ್ಯಮಿಯೊಬ್ಬರಿಗೆ ಹೆದರಿಸಿ, ಬೆದರಿಕೆ ಹಾಕಿ ಹಪ್ತಾ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ, ಈಗಾಗಲೇ ಗಡಿಪಾರಾಗಿದ್ದ ರೌಡಿಶೀಟರ್‌ನನ್ನು ಪೊಲೀಸರು ಮದುವೆ ಮಂಟಪದಿಂದಲೇ ವಶಕ್ಕೆ ಪಡೆದು ಎಳೆದೊಯ್ದಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಕೆಜಿಎಫ್‌ ನಗರದಲ್ಲಿ ಈ ಘಟನೆ ನಡೆದಿದೆ. ಕೆಜಿಎಫ್ ನಗರದ ಸುಸೈಪಾಳ್ಯಂ ಏರಿಯಾದ ನಿವಾಸಿ, ಕುಖ್ಯಾತ ರೌಡಿಶೀಟರ್ ಸ್ಟಾನ್ಲಿ ಬಂಧಿತ ಆರೋಪಿ. ಚರ್ಚ್‌ನಲ್ಲಿ ಮಗಳ ಮದುವೆ ಸಂಭ್ರಮದಲ್ಲಿದ್ದ ರೌಡಿಯನ್ನು ಪೊಲೀಸರು ಏಕಾಏಕಿ ಕಾರ್ಯಾಚರಣೆ ನಡೆಸಿ ಹೊತ್ತೊಯ್ದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸ್ ಮೂಲಗಳ ಪ್ರಕಾರ, ಮಗಳ ಮದುವೆಗೆ ಪೆಂಡಾಲ್ ಹಾಗೂ ಡೆಕೋರೇಷನ್ ಕೆಲಸ ಮಾಡಿಕೊಡುತ್ತಿದ್ದ ಅಂಗಡಿ ಮಾಲೀಕ ಮೊಹಮ್ಮದ್ ಸಕ್ಲೇನ್ ಎಂಬುವರಿಗೆ ರೌಡಿಶೀಟರ್ ಸ್ಟಾನ್ಲಿ ಬೆದರಿಕೆ ಹಾಕಿದ್ದ. ತನಗೆ ಹೆದರಿಸಿ, ಬೆದರಿಕೆ ಹಾಕಿ ತನ್ನ ಮಗಳ ಮದುವೆಗೆ ಹಣ ನೀಡುವಂತೆ ಪೀಡಿಸುತ್ತಿದ್ದಾನೆ ಎಂದು ಸಂತ್ರಸ್ತ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದರು.

ಈಗಾಗಲೇ ನಗರದಿಂದ ಗಡಿಪಾರಾಗಿದ್ದರೂ ಕಾನೂನು ಉಲ್ಲಂಘಿಸಿ ನಗರದೊಳಗೆ ಪ್ರವೇಶಿಸಿದ್ದಲ್ಲದೆ, ಸಾರ್ವಜನಿಕರಿಗೆ ಹಪ್ತಾ ವಸೂಲಿಗಾಗಿ ಕಿರುಕುಳ ನೀಡುತ್ತಿದ್ದ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣವೇ ಅಲರ್ಟ್ ಆಗಿದ್ದಾರೆ.

ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಅವರ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆಸಿ ಆಂಡರ್ಸನ್‌ಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ, ಸುಸೈಪಾಳ್ಯಂ ಚರ್ಚ್‌ನಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಮದುವೆ ಮಂಟಪದಲ್ಲೇ ಇದ್ದ ಆರೋಪಿ ಸ್ಟಾನ್ಲಿಯನ್ನು ಸುತ್ತುವರಿದು ಸಿನಿಮೀಯ ಶೈಲಿಯಲ್ಲಿ ಎಳೆದೊಯ್ದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular