ಕೋಲಾರ: ಕೃಷಿ ಹೊಂಡದಲ್ಲಿ ಮುಳುಗಿ ತಂದೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಕೂಲಿನ ನಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶ್ರೀನಿವಾಸ್ (41), ಮಕ್ಕಳಾದ ಚೇತನ್(13), ರಾಜೇಶ್ (8) ಮೃತ ದುರ್ದೈವಿಗಳು. ನಕ್ಕನಹಳ್ಳಿಯ ಈರಪ್ಪ ಎಂಬುವವರಿಗೆ ಸೇರಿದ ಕೃಷಿ ಹೊಂಡದಲ್ಲಿ ಈ ದುರಂತ ಸಂಭವಿಸಿದೆ. ತಂದೆ ಶ್ರೀನಿವಾಸ್, ಇಬ್ಬರು ಮಕ್ಕಳಿಗೂ ಈಜಲು ಕಲಿಸಲು ಕೃಷಿ ಹೊಂಡಕ್ಕೆ ಕರೆದೊಯ್ದರು. ಈ ವೇಳೆ ನೀರಿನಲ್ಲಿ ಮುಳುಗಿ ಮೂವರೂ ಮೃತಪಟ್ಟಿದ್ದಾರೆ.
ಪತಿ ಹಾಗೂ ಇಬ್ಬರು ಮಕ್ಕಳನ್ನು ಕಳೆದುಕೊಂಡಿರುವ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

