HomeKarnatakaBIG NEWS: ಬಾರ್ ಸಿಬ್ಬಂದಿ ಮೇಲೆ ಪೊಲೀಸ್ ಅಧಿಕಾರಿಯಿಂದಲೇ ಹಲ್ಲೆ; ASI ಸಸ್ಪೆಂಡ್

BIG NEWS: ಬಾರ್ ಸಿಬ್ಬಂದಿ ಮೇಲೆ ಪೊಲೀಸ್ ಅಧಿಕಾರಿಯಿಂದಲೇ ಹಲ್ಲೆ; ASI ಸಸ್ಪೆಂಡ್

ಕೋಲಾರ: ಕುಡಿದ ಮತ್ತಿನಲ್ಲಿ ಬಾರ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೋಲಾರ ಗ್ರಾಮಾಂತರ ಠಾಣೆ ಎಎಸ್ಐಯನ್ನು ಅಮಾನತು ಮಾಡಿ ಆದೇಶ ಹೊರಡಿನ ಸಲಾಗಿದೆ.

ನಾರಾಯಣಸ್ವಾಮಿ ಅಮಾನತುಗೊಂಡ ಎಎಸ್ಐ. ಕಳೆದ ಶನಿವಾರ ಎಎಸ್ಐ ನಾರಾಯಣಸ್ವಾಮಿ, ಕುಡಿದ ಮತ್ತಲ್ಲಿ ಬಂಗಾರಪೇಟೆ ವೃತ್ತದಲ್ಲಿರುವ ಬಾರ್ ಸಿಬ್ಬಂದಿ ತನಗೆ ನಮಸ್ಕಾರ ಹೇಳಿಲ್ಲ ಎಂದು ಗಲಾಟೆ ಮಾಡಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಎಎಸ್ಐ ಗಲಾಟೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣ ಸಂಬಂಧ ಬಾರ್ ಸಿಬ್ಬಂದಿಗಳು ಸಾಕ್ಷಿ ಸಮೇತ ಠಾಣೆಗೆ ಎಎಸ್ಐ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಲಾಖೆಗೆ ಅಗೌರವ, ದುರ್ನಡತೆ, ಬೇಜವಾಬ್ದಾರಿ, ಉದಾಸೀನ ತೋರಿದ ಆರೋಪದಲ್ಲಿ ನಾರಾಯಣ ಸ್ವಾಮಿಯನ್ನು ಎಸ್ ಪಿ ನಾರಾಯಣ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular