HomeKarnatakaಪತ್ನಿ ಚುಡಾಯಿಸಿದ್ದಕ್ಕೆ ಯುವಕನನ್ನು ಇರಿದು ಕೊಂದ ಪತಿ

ಪತ್ನಿ ಚುಡಾಯಿಸಿದ್ದಕ್ಕೆ ಯುವಕನನ್ನು ಇರಿದು ಕೊಂದ ಪತಿ

ಕೋಲಾರ: ಪದೇ ಪದೇ ಪತ್ನಿಯನ್ನು ಚುಡಾಯಿಸುತ್ತಿದ್ದ ಯುವಕನನ್ನು ಪತಿಯೊಬ್ಬ ಹತ್ಯೆಗೈದಿರುವ ಘಟನೆ ಕೋಲಾರ ಜಿಲ್ಲೆಯ ಜಮಾಲ್ ಷಾ ನಗರದಲ್ಲಿ ನಡೆದಿದೆ.

25 ವರ್ಷದ ರೋಹಿದ್ ಅಲಿಯಾಸ್ ಅರ್ಬಾಜ್ ಕೊಲೆಯಾದ ಯುವಕ. ಅಮ್ಜದ್ ಕೊಲೆ ಮಾಡಿರುವ ಆರೋಪಿ. ರೋಹಿದ್ ಅಲಿಯಾಸ್ ಅರ್ಬಾಜ್ ಕೆಲ ದಿನಗಳಿಂದ ಅಮ್ಜದ್ ಪತ್ನಿಯ ಮೇಲೆ ಕಣ್ಣು ಹಾಕಿದ್ದ. ಇದೇ ವಿಚಾರವಾಗಿ ರೋಹಿದ್ ಗೆ ಅಮ್ಜಾದ್ ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದ್ದ. ಆದರೆ ತನ್ನ ಹಳೇ ಚಾಳಿ ಮುಂದುವರೆಸಿದ್ದ ರೋಹಿದ್ ನನ್ನು ಚಾಕುವಿನಿಂದ ಇರಿದು ಕೊಂದೇ ಬಿಟ್ಟಿದ್ದಾನೆ.

ರೋಹಿದ್ ನ ಎದೆಗೆ ಚಾಕುವಿನಿಂದ ಇರಿದು ಅಮ್ಜಾದ್ ಕೊಲೆಗೈದಿದ್ದು, ಆರೋಪಿಯನ್ನು ಕೋಲಾರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular