HomeKarnatakaBREAKING NEWS: ಬೆಟ್ಟದಲ್ಲಿ ಮಣ್ಣು ತೆಗೆಯುವಾಗ ದುರಂತ: ಬೃಹತ್ ಕಲ್ಲುಬಂಡೆ ಬಿದ್ದು ಟ್ರ್ಯಾಕ್ಟರ್ ಚಾಲಕ ಸಾವು

BREAKING NEWS: ಬೆಟ್ಟದಲ್ಲಿ ಮಣ್ಣು ತೆಗೆಯುವಾಗ ದುರಂತ: ಬೃಹತ್ ಕಲ್ಲುಬಂಡೆ ಬಿದ್ದು ಟ್ರ್ಯಾಕ್ಟರ್ ಚಾಲಕ ಸಾವು

ಕೋಲಾರ: ಬೆಟ್ಟದಲ್ಲಿ ಮಣ್ಣು ತೆಗೆಯುವ ವೇಳೆ ದುರಂತ ಸಂಭವಿಸಿದ್ದು, ಬೃಹತ್ ಕಲ್ಲುಬಂಡೆ ಬಿದ್ದು ಟ್ರ್ಯಾಕ್ಟರ್ ಚಾಲಕ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಅರಾಭಿಕೊತ್ತನೂರು ಬಳಿಯ ಕ್ವಾರಿಯಲ್ಲಿ ನಡೆದಿದೆ.

ಅರಾಭಿಕೊತ್ತನೂರು ಗ್ರಾಮದ ನಿವಾಸಿ ನಾಗರಾಜ್ (38) ಮೃತ ವ್ಯಕ್ತಿ. ಜೆಸಿಬಿ ಮೂಲಕ ಮಣ್ಣು ತೆಗೆಯುವ ವೇಳೆ ಕಲ್ಲುಬಂಡೆ ಬಿದ್ದು ಈ ದುರಂತ ಸಂಭವಿಸಿದೆ. ಕಲ್ಲುಬಂಡೆಯಡಿ ಚಾಲಕ ನಾಗರಾಜ್ ಟ್ರ್ಯಾಕ್ಟರ್ ಸಮೇತ ಸಿಲುಕಿಕೊಂಡು ಮೃತಪಟ್ಟಿದ್ದಾರೆ.

1 ಜೆಸಿಬಿ, 2 ಟ್ರ್ಯಾಕ್ಟರ್ ನಲ್ಲಿ ಮಣ್ಣು ತೆಗೆಯಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಧಾವಿಸಿರುವ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಜೆಸಿಬಿ ಹಾಗೂ ಟ್ರ್ಯಾಕ್ಟರ್ ವಶಕ್ಕೆ ಪಡೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular