
ಇವರು ಕಾಫಿ ಉದ್ಯಮಿಯಾಗಿದ್ದು, ದೆಹಲಿಯಲ್ಲಿ ನಡೆದ 4 ದಿನಗಳ ಕಾಫಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳಿದ್ದರು. ಭೀಕರ ವಾಯುಮಾಲಿನ್ಯಕ್ಕೆ ತುತ್ತಾದ ಇವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಮಾರನೇ ದಿನ ಬೆಂಗಳೂರಿಗೆ ಹಿಂತಿರುಗಿದ್ದರು.
ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

