ದೇವರಿಗೆ ʼಪ್ರಸಾದʼ ಅರ್ಪಿಸುವ ಮುನ್ನ ತಿಳಿದುಕೊಳ್ಳಿ ಈ ವಿಷಯ

ದೇವಸ್ಥಾನವಿರಲಿ, ಮನೆಯಿರಲಿ ದೇವರಿಗೆ ಪಂಚಾಮೃತ ಪೂಜೆ ಮಾಡಲಾಗುತ್ತದೆ. ಇದರ ಜೊತೆಗೆ ದೇವರಿಗೆ ಬೇರೆ ಆಹಾರಗಳನ್ನು ನೈವೇದ್ಯ ಮಾಡಿ ಪ್ರಸಾದ ರೂಪದಲ್ಲಿ ವಿತರಣೆ ಮಾಡಲಾಗುತ್ತದೆ.

ಪ್ರತಿಯೊಂದು ದೇವರಿಗೂ ಪ್ರಿಯವಾದ ಪ್ರಸಾದಗಳು ಬೇರೆ ಬೇರೆ ಇರುತ್ತವೆ. ಆಯಾ ದೇವರಿಗೆ ಪ್ರಿಯವಾದ ಪ್ರಸಾದವನ್ನು ಆ ದೇವರಿಗೆ ನೈವೇದ್ಯ ಮಾಡುವುದು ಒಳ್ಳೆಯದು. ಪ್ರಸಾದ ಮಾಡಿ ದೇವರಿಗೆ ಅರ್ಪಣೆ ಮಾಡುವ ಮುನ್ನ ಯಾವ ದೇವರಿಗೆ ಯಾವ ಪ್ರಸಾದ ಪ್ರಿಯ ಎನ್ನುವುದನ್ನು ತಿಳಿದುಕೊಳ್ಳಿ.

ಶ್ರೀ ವಿಷ್ಣುವಿಗೆ ಕೀರ್ ಅಥವಾ ರವೆಯ ಹವ್ಲಾ ಎಂದರೆ ಪ್ರಿಯ. ಹಾಗಾಗಿ ಶ್ರೀವಿಷ್ಣುವಿನ ಆರಾಧನೆ ಮಾಡುವಾಗ ಈ ಎರಡು ಸಿಹಿಯಲ್ಲಿ ಒಂದನ್ನು ತಯಾರಿಸಿ ನೈವೇದ್ಯ ಮಾಡಬೇಕು.

ದೇವರ ದೇವ ಮಹಾದೇವ ಶಿವ, ಪಂಚಾಮೃತ ಪ್ರಿಯ.

ವಿದ್ಯಾ ದೇವಿ ಸರಸ್ವತಿಗೆ ಭಕ್ತರು ಹಾಲು, ಪಂಚಾಮೃತ, ತುಪ್ಪ, ಬೆಣ್ಣೆ, ಬಿಳಿ ಅಕ್ಕಿಯ ಲಾಡಿನ ನೈವೇದ್ಯ ಮಾಡಬೇಕು.

ಧನ ಲಕ್ಷ್ಮಿಗೆ ಮಿಠಾಯಿ ಹಾಗೂ ಅಕ್ಕಿಯ ಕೇಸರಿ ಬಾತ್ ಅರ್ಪಣೆ ಮಾಡಬೇಕು.

ದುರ್ಗಿಗೆ ಕೀರ್, ಮಿಠಾಯಿ, ಬಾಳೆ ಹಣ್ಣು, ತೆಂಗಿನ ಕಾಯಿಯನ್ನು ನೈವೇದ್ಯ ಮಾಡಬೇಕು.

ಪ್ರಥಮ ಪೂಜ್ಯ ಗಣೇಶನಿಗೆ ಮೋದಕವನ್ನು ನೈವೇದ್ಯ ಮಾಡಬೇಕು.

ಕೇಸರಿಬಾತ್, ಕೀರ್ ಪ್ರಿಯ ಶ್ರೀರಾಮ.

ಶ್ರೀಕೃಷ್ಣ ಸಕ್ಕರೆ ಹಾಗೂ ಬೆಣ್ಣೆ ಪ್ರಿಯ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read