HomeKarnatakaKMDC ಚೇರ್ಮನ್ ವಿರುದ್ಧ FIR ದಾಖಲು

KMDC ಚೇರ್ಮನ್ ವಿರುದ್ಧ FIR ದಾಖಲು

ಮೈಸೂರು: ಮೌಲಾನಾ ಅಕ್ಮಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಂಡಿಸಿ ಚೇರ್ಮನ್ ಬಿ.ಕೆ.ಅಲ್ತಾಫ್ ಸೇರಿದಂತೆ ಐವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಮಾರ್ಚ್ 8ರಂದು ಮೈಸೂರಿನ ರಾಜೀವ್ ನಗರದ ನಿಮ್ರಾ ಮಸೀದಿ ಬಳಿ ಅಕ್ಮಲ್ ಕೊಲೆಯಾಗಿತ್ತು. ಈ ಹಿಂದೆ ಬಿ.ಕೆ. ಅಲ್ತಾಫ್ ಕಾರ್ಯಕ್ರಮವೊಂದರಲ್ಲಿ ಮೌಲಾನಾ ಅಕ್ಮಲ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೇ ಕಾರಣಕ್ಕೆ ಮೌಲಾನಾ ಅಕ್ಮಲ್ ಬಿ.ಕೆ. ಅಲ್ತಾಫ್ ವಿರುದ್ಧ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೇ ವಿಡಿಯೋದಲ್ಲಿ ಸಾಕಷ್ಟು ವಿಚಾರಗಳನ್ನು ಪ್ರಸ್ತಾಪಿಸಿದ್ದರು. ಸವಾಲು ಹಾಕಿದ್ದರು.

ಈ ಎಲ್ಲಾ ಬೆಳವಣಿಗೆ ಬಳಿಕ ಮೌಲಾನಾ ಅಕ್ಮಲ್ ಹತ್ಯೆಯಾಗಿದ್ದು, ಅಕ್ಮಲ್ ಪತ್ನಿ ದೂರಿನ ಹಿನ್ನೆಲೆಯಲ್ಲಿ ಬಿ.ಕೆ.ಅಲ್ತಾಫ್ ಸೇರಿ ಐವರ ವಿರುದ್ಧ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular