ಕೋಟಾ : ಪ್ರೇಮಿಗಳಿಬ್ಬರು ಚಲಿಸುತ್ತಿದ್ದ ಬೈಕಿನಲ್ಲಿ ಪರಸ್ಪರ ತಬ್ಬಿಕೊಂಡು ಚುಂಬಿಸುವ ಅಶ್ಲೀಲ ಕೃತ್ಯದ ವಿಡಿಯೋ ವೈರಲ್ ಆಗಿದ್ದು, ಪ್ರೇಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಕೋಟಾದ ಬೀದಿಗಳಲ್ಲಿ ಬೈಕ್ ಸವಾರಿ ಮಾಡುವಾಗ ಸಾರ್ವಜನಿಕವಾಗಿ ಪರಸ್ಪರ ಚುಂಬಿಸಿ ಸ್ಟಂಟ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಪ್ರೇಮಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಬಳಿಕ ಪೊಲೀಸರ ಬಳಿ ಪ್ರೇಮಿಗಳು ಕ್ಷಮೆಯಾಚಿಸಿದ್ದಾರೆ.ನಾವು ಮಾಡಿದ ತಪ್ಪಿಗೆ ಜನರ ಕ್ಷಮೆಯಾಚಿಸುತ್ತೇವೆ, ಇನ್ನುಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎಂದು ತಪ್ಪೊಪ್ಪಿಗೆ ಬರೆದುಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
https://twitter.com/i/status/1793745549881135584
ख़तरनाक।
सोचिए ये इनके लिए मज़ा है।
लेकिन जरा सी भी चूक होते ही इनके घर के बाहर सफ़ेद टेंट और दरी बिछ सकती है। pic.twitter.com/YbUW4EMzqX
— Sagar Kumar “Sudarshan News” (@KumaarSaagar) May 23, 2024

