ಮತ್ತೆ ಕಿಚ್ಚು ಹಚ್ಚಿದ ಕಿಲಿ ಪೌಲ್​: ರ‍್ಯಾಪ್ ಡಾನ್ಸ್​ಗೆ ನೆಟ್ಟಿಗರು ಫಿದಾ

article-imageಕಿಲಿ ಪೌಲ್ ಮತ್ತು ಅವರ ಸಹೋದರಿ ನೀಮಾ ಪೌಲ್ ತಮ್ಮ ಹೊಸ ನೃತ್ಯ ವೀಡಿಯೊದೊಂದಿಗೆ ಮತ್ತೆ ಮರಳುತ್ತಿರುತ್ತಾರೆ. ಅವರು ತಮ್ಮ ಇತ್ತೀಚಿನ ನೃತ್ಯ ವೀಡಿಯೊವನ್ನು ಬಿಹಾರದ ತಮ್ಮ ಅಭಿಮಾನಿಗಳಿಗೆ ಅರ್ಪಿಸಿದ್ದು ಭಾರಿ ವೈರಲ್​ ಆಗಿತ್ತು. ವೀಡಿಯೊದಲ್ಲಿ, ಅಣ್ಣ-ತಂಗಿ ಜೋಡಿಯು ಭೋಜ್‌ಪುರಿ ಹಾಡು ನಾಥುನಿಯಾಗೆ ನರ್ತಿಸಿ ನೆಟ್ಟಿಗರ ಶ್ಲಾಘನೆಗೆ ಕಾರಣವಾಗಿದ್ದರು.

ಇದೀಗ ಕಿಲಿ ಪಾಲ್ ಅವರು ಹೊಸ ವಿಡಿಯೋ ಹಾಕಿದ್ದಾರೆ. ಅದರಲ್ಲಿ ಅವರು ಒಂದು ತಿಂಗಳ ಹಿಂದೆ ಬಿಡುಗಡೆಯಾದ ರ‍್ಯಾಪ್ ಡಾನ್ಸ್​ ‘ಕಂಪನಿ’ಗೆ ಸ್ಟೆಪ್​ ಹಾಕಿದ್ದಾರೆ.

ಇದರಲ್ಲಿ ಅವರ ಫ್ಯಾಷನ್ ಸೆನ್ಸ್​ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ತಂಪಾದ ಸೊಗಸುಗಾರ ನೋಟ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ. ಅವರು ಸ್ವಲ್ಪ ಸಮಯದವರೆಗೆ ತಮ್ಮ ಸಾಂಪ್ರದಾಯಿಕ ಉಡುಪನ್ನು ತ್ಯಜಿಸುವುದನ್ನು ವಿಡಿಯೋದಲ್ಲಿ ನೋಡಬಹುದು.

ಕ್ಯಾ ಬೋಲ್ತಿ ಕಂಪೆನಿ ಟ್ವಿಟರ್​ನಲ್ಲಿ ಇದನ್ನು ಶೇರ್​ ಮಾಡಿದ್ದು, ಇದು ಇಲ್ಲಿಯವರೆಗೆ ಎರಡು ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು 2.5 ಮಿಲಿಯನ್ ವೀಕ್ಷಣೆ ಪಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read