HomeInternationalಲಂಡನ್ ನಲ್ಲಿ ಭಾರತೀಯ ಹೈಕಮಿಷನ್ ಮೇಲೆ ದಾಳಿ: ಧ್ವಜ ಕೆಳಕ್ಕೆ ಇಳಿಸಿದ ಖಲಿಸ್ತಾನಿ ಬೆಂಬಲಿಗರು

ಲಂಡನ್ ನಲ್ಲಿ ಭಾರತೀಯ ಹೈಕಮಿಷನ್ ಮೇಲೆ ದಾಳಿ: ಧ್ವಜ ಕೆಳಕ್ಕೆ ಇಳಿಸಿದ ಖಲಿಸ್ತಾನಿ ಬೆಂಬಲಿಗರು

ಭಾನುವಾರ ರಾತ್ರಿ ಲಂಡನ್‌ ನಲ್ಲಿರುವ ಭಾರತೀಯ ಹೈಕಮಿಷನ್‌ನ ಮೇಲೆ ಖಲಿಸ್ತಾನಿ ಬೆಂಬಲಿಗರ ಗುಂಪು ದಾಳಿ ಮಾಡಿ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ ಅದರ ಬದಲಿಗೆ ಖಲಿಸ್ತಾನಿ ಧ್ವಜಗಳನ್ನು ಹಾಕಿತ್ತು.

ಭಾರತೀಯ ಧ್ವಜವು ಕಟ್ಟಡದ ಮತ್ತೆ ಹಾರಾಡುತ್ತಿದ್ದು, ಖಲಿಸ್ತಾನಿ ಬೆಂಬಲಿಗರ ಪ್ರಯತ್ನ ವಿಫಲಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಕಾಟ್ಲೆಂಡ್ ಯಾರ್ಡ್ ನಲ್ಲಿ ಘಟನೆ ನಡೆದಿದೆ. ವಿಚಾರಣೆ ಮುಂದುವರೆದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ದಾಳಿಯ ವೇಳೆ ಯಾವುದೇ ಗಾಯದ ವರದಿಯಾಗಿಲ್ಲ, ಆದಾಗ್ಯೂ ಹೈಕಮಿಷನ್ ಕಟ್ಟಡದಲ್ಲಿ ಕಿಟಕಿಗಳು ಮುರಿದುಹೋಗಿವೆ ಎಂದು ಮೆಟ್ರೋಪಾಲಿಟನ್ ಪೊಲೀಸ್ ಹೇಳಿಕೆ ತಿಳಿಸಿದೆ.

ಪೊಲೀಸರು ಬರುವ ಮುನ್ನವೇ ಅಲ್ಲಿದ್ದ ಬಹುತೇಕರು ಚದುರಿ ಹೋಗಿದ್ದರು. ಪ್ರತಿಭಟನೆಗೆ ಸಂಬಂಧಿಸಿದಂತೆ ಭಾರತವು ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಅವರನ್ನು ಕರೆಸಿ ಖಾಲಿಸ್ತಾನಿ ಸಹಾನುಭೂತಿಗಳು ಹೈಕಮಿಷನ್ ಮೇಲೆ ದಾಳಿ ಮಾಡಿದಾಗ ಭದ್ರತೆ ನೀಡದ ಬಗ್ಗೆ ವಿವರಣೆ ಕೇಳಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆ ಬಿಡುಗಡೆ ಮಾಡಿದ್ದು, UK ಸರ್ಕಾರದ ಉದಾಸೀನತೆ ‘ಸ್ವೀಕಾರಾರ್ಹವಲ್ಲ’ ಎಂದು ಹೇಳಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular