ಭಾರತೀಯ ದೂತವಾಸ ಕಚೇರಿಗೆ ಖಲಿಸ್ತಾನಿ ಬೆಂಬಲಿಗರಿಂದ ಬೆಂಕಿ: ಕೃತ್ಯ ಖಂಡಿಸಿದ ಭಾರತ, ಕ್ರಮಕ್ಕೆ ಒತ್ತಾಯ

ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿರುವ ಭಾರತೀಯ ದೂತವಾಸ ಕಚೇರಿಗೆ ಖಲಿಸ್ತಾನಿ ಬೆಂಬಲಿಗರು ಬೆಂಕಿ ಹಚ್ಚಿದ್ದಾರೆ. ಭಾರತ ಸರ್ಕಾರ ಖಲಿಸ್ತಾನಿಗಳ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದು, ಸೂಕ್ತ ಕ್ರಮಕ್ಕೆ ಒತ್ತಾಯಿಸಿದೆ.

ದೂತವಾಸ ಕಚೇರಿಗೆ ಬೆಂಕಿ ಹಚ್ಚಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. ಐದು ತಿಂಗಳ ಹಿಂದೆಯೂ ಭಾರತೀಯ ದೂತವಾಸ ಕಚೇರಿ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದರು.

ಜೂನ್ 2 ರಂದು(ಭಾನುವಾರ) ಖಲಿಸ್ತಾನಿ ಮೂಲಭೂತವಾದಿಗಳ ಗುಂಪು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸಕ್ಕೆ ಬೆಂಕಿ ಹಚ್ಚಿದೆ. ಸ್ಥಳದಲ್ಲಿ ಯಾವುದೇ ಜೀವಹಾನಿ ಅಥವಾ ಹೆಚ್ಚಿನ ಹಾನಿ ವರದಿಯಾಗಿಲ್ಲ.

ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಜುಲೈ 2, 2023 ರ ದಿನಾಂಕದ ಖಲಿಸ್ತಾನ್ ಬೆಂಬಲಿಗರ ವಿಡಿಯೋ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತವಾಸದಲ್ಲಿ ಬೆಂಕಿ ಹಚ್ಚಿದ ಕೃತ್ಯ ತೋರಿಸಿದೆ.

ಹಿಂಸಾಚಾರವು ಹಿಂಸೆಯನ್ನು ಹುಟ್ಟುಹಾಕುತ್ತದೆ ಎಂಬ ಪದಗಳೊಂದಿಗೆ ವೀಡಿಯೊದಲ್ಲಿ ಕೆನಡಾ ಮೂಲದ ಖಲಿಸ್ತಾನ್ ಟೈಗರ್ ಫೋರ್ಸ್(ಕೆಟಿಎಫ್) ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ಸಾವಿಗೆ ಸಂಬಂಧಿಸಿದ ಸುದ್ದಿ ಲೇಖನಗಳನ್ನು ಸಹ ತೋರಿಸಲಾಗಿದೆ.

ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾದ ನಿಜ್ಜರ್, ತನ್ನ ತಲೆಯ ಮೇಲೆ 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ಹೊಂದಿದ್ದು, ಕಳೆದ ತಿಂಗಳು ಕೆನಡಾದ ಗುರುದ್ವಾರದ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು.

ದೂತವಾಸ ಕಚೇರಿಗೆ ಬೆಂಕಿ ಹಚ್ಚಿದ ಕೃತ್ಯವನ್ನು ಅಮೆರಿಕ ಖಂಡಿಸಿದೆ. ಶನಿವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸದ ವಿರುದ್ಧ ವರದಿಯಾದ ವಿಧ್ವಂಸಕ ಕೃತ್ಯ ಮತ್ತು ಬೆಂಕಿ ಹಚ್ಚುವ ಪ್ರಯತ್ನವನ್ನು ಯುಎಸ್ ಖಂಡಿಸುತ್ತದೆ. ಯುಎಸ್‌ನಲ್ಲಿ ರಾಜತಾಂತ್ರಿಕ ಸೌಲಭ್ಯಗಳು ಅಥವಾ ವಿದೇಶಿ ರಾಜತಾಂತ್ರಿಕರ ವಿರುದ್ಧ ವಿಧ್ವಂಸಕ ಅಥವಾ ಹಿಂಸಾಚಾರವು ಕ್ರಿಮಿನಲ್ ಅಪರಾಧವಾಗಿದೆ ಎಂದು ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

https://twitter.com/pun_fact/status/1676042272524173314

https://twitter.com/StateDeptSpox/status/1676013681191145473

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read