ರಾಜ್ ಗುರು ನಿರ್ದೇಶನದ ಗೌರಿಶಂಕರ್ ಅಭಿನಯದ ಕೆರೆ ಬೇಟೆ ಚಿತ್ರ ಮಾರ್ಚ್ 15 ರಂದು ರಾಜ್ಯದ್ಯಂತ ತೆರೆ ಕಂಡಿತ್ತು, ಹಳ್ಳಿ ಸೊಗಡಿನ ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿತ್ತು ಕೆರೆ ಬೇಟೆ ಇದೀಗ 50 ದಿನಗಳನ್ನು ಪೂರೈಸಿ ಭರ್ಜರಿಯಾಗಿ ಮುನ್ನುಗ್ಗುತ್ತಲೇ ಇದೆ.
ಈ ಚಿತ್ರವನ್ನು ಜನಮನ ಸಿನಿಮಾಸ್ ಬ್ಯಾನರ್ ನಲ್ಲಿ ಜೈ ಶಂಕರ್ ಪಾಟೀಲ್ ನಿರ್ಮಾಣ ಮಾಡಿದ್ದು, ಗೌರಿಶಂಕರ್ ಗೆ ಜೋಡಿಯಾಗಿ ಬಿಂದು ಶಿವರಾಮ್ ಅಭಿನಯಿಸಿದ್ದಾರೆ. ಗೋಪಾಲ್ ದೇಶಪಾಂಡೆ, ಸಂಪತ್ ಮೈತ್ರಿಯ, ಹರಿಣಿ ಶ್ರೀಕಾಂತ್, ಚಿಲ್ಲರ್ ಮಂಜು, ರಾಕೇಶ್ ಪೂಜಾರಿ, ವರ್ಧನ್ ತೀರ್ಥಹಳ್ಳಿ, ರಾಮದಾಸ್, ರಘು ರಾಜನಂದ, ಮತ್ತು ಶೇಖರ್ ಉಳಿದ ಪಾತ್ರವರ್ಗದಲ್ಲಿದ್ದಾರೆ. ಜ್ಞಾನೇಶ್ ಬಿ ಮಾತಾಡ್ ಸಂಕಲನ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಟೈಗರ್ ಶಿವು ಮತ್ತು ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನವಿದೆ. ಗಗನ್ ಸಂಗೀತ ಸಂಯೋಜನೆ ನೀಡಿದ್ದಾರೆ.
Fifty days of pure cinematic delight with Kerebete! 🌟 Thank you for making every moment unforgettable. Let's keep the applause going – catch Kerebete at a theater near you and be part of the magic! #Kerebete #50DaysOfWonder #A2music pic.twitter.com/aWfUIOiV2a
— A2 Music (@A2MusicSouth) May 4, 2024

