ತಿರುವನಂತಪುರಂ: ಇತ್ತೀಚಿನ ದಿನಗಳಲ್ಲಿ ಮನುಷ್ಯನ ಸ್ವಾರ್ಥ, ದುರಾಸೆಗೆ ಮಿತಿ ಇಲ್ಲದಂತಾಗಿದೆ. ಕೇರಳದ ತಿರುವನಂತಪುರಂ ನಲ್ಲಿ ನಡೆದ ಘಟನೆಯೊಂದು ಬೆಚ್ಚಿಬೀಳಿಸುವಂತಿದೆ. ಕೆಲ ದಿನಗಳ ಹಿಂದೆ ಒಂದು ವರ್ಷದ ಮಗು ಸಾವನ್ನಪ್ಪಿದ ಘಟನೆ ಕೇರಳದ ತಿರುವನಂತಪುರಂ ನಲ್ಲಿ ನಡೆದಿತ್ತು. ಹೆತ್ತ ತಂದೆಯೇ ಮಗುವನ್ನು ಕೊಲೆಗೈದಿರುವುದು ಬೆಳಕಿಗೆ ಬಂದಿತ್ತು. ಪ್ರಕರಣ ತನಿಖೆ ನಡೆಸಿದ ಪೊಲೀಸರಿಗೆ ಮತ್ತಷ್ಟು ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿವೆ.
ಒಂದು ವರ್ಷದ ಕಂದಮ್ಮನನ್ನು ಮಗುವನ ತಂದೆ ಶಿಜಿಲ್ ನೆ ಕೊಲೆ ಮಾಡಿರುವುದು ತಿಳಿದುಬಂದಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಹಲವು ವಿಚಾರಗಳನ್ನು ಬಾಯ್ಬಿಡಿಸಿದ್ದಾರೆ. ಅಷ್ಟಕ್ಕೂ ಜನ್ಮಕೊಟ್ಟ ಮಗುವನ್ನೇ ಕೊಲ್ಲಲು ಕಾಣವಾದರೂ ಏನು? ಇಲ್ಲಿದೆ ಸ್ಟೋರಿ.
ಮೃತ ಮಗುವಿನ ತಂದೆ ಆರೋಪಿ ಶಿಜಿಲ್ ಮೊಬೈಲ್ ಪರಿಶೀಲಿಸಿದಾಗ ಆತ ಹಲವು ಸೆಕ್ಸ್ ಚಾಟ್ ಗ್ರೂಪ್ ಗಳಲ್ಲಿ ಆಕ್ಟೀವ್ ಆಗಿದ್ದ. ಶಿಜಿಲ್ ಮಹಿಳೆಯರ ಜೊತೆ ಸೆಕ್ಸ್ ಚಾಟ್ ಗೆಂದೇ ಗ್ರೂಪ್ ಮಾಡಿಕೊಂಡಿದ್ದ ಎಂಬುದು ಬಹಿರಂಗವಾಗಿದೆ. ಸೆಕ್ಸ್ ಗೆ ಮಗು ಅಡ್ಡಿ ಪಡಿಸಿದ್ದಕ್ಕೆ ಮಗುವನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ ಪಾಪಿ.
ಕೇರಳದ ಐಕಾರವಿಳಕ್ಕಂನ ಬಾಡಿಗೆ ಮನೆಯೊಂದರಲ್ಲಿ ಶಿಜಿಲ್ ಹಾಗೂ ಕೃಷ್ಣಪ್ರಿಯಾ ದಂಪತಿ ತಮ್ಮ ಒಂದು ವರ್ಷದ ಮಗುವಿನೊಂದಿಗೆ ವಾಸವಾಗಿದ್ದರು. ಜನವರಿ 16ರಂದು ದಂಪತಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಮಗು ಬಿಸ್ಕೆಟ್, ದ್ರಾಕ್ಷಿ ತಿಂದ ಬಳಿಕ ಕುಸಿದು ಬಿದ್ದಿದೆ ಎಂದು ಹೇಳಿದ್ದರು. ಮಗು ಇಹಾನ್ ನನ್ನು ವೈದ್ಯರು ಪರೀಕ್ಷಿಸಿದಾಗ ಅದು ಮೃತಪಟ್ಟಿರುವುದು ಗೊತ್ತಾಗಿದೆ. ಇದೇ ವೇಳೆ ಹೊಟ್ಟೆ ಭಾಗದಲ್ಲಿ ಗಾಯವಾಗಿರುವುದನ್ನು ಪತ್ತೆ ಮಾಡಿದ್ದಾರೆ. ವೈದ್ಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಗುವಿನ ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ಪೋಷಕರನ್ನು ಪೊಲೀಸರು ಮತ್ತೆ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಶಿಜಿಲ್ ಪತ್ನಿ ನೀಡಿದ ಹೇಳಿಕೆ ಇಡೀ ಪ್ರಕರಣಕ್ಕೆ ತಿರುವು ನೀಡಿದೆ. ಅಂದು ರಾತ್ರಿ ಪತಿ-ಪತ್ನಿ ಸೆಕ್ಸ್ ವೇಳೆ ಮಗು ಅಳಲಾರಂಭಿಸಿದೆ. ಇದರಿಂದ ಕೋಪಗೊಂಡ ತಂದೆ ಶಿಜಿಲ್, ಮಗುವನ್ನು ಎತ್ತಿಕೊಂಡು ಮಗುವಿನ ಹೊಟ್ಟೆ, ಎದೆಯ ಭಾಗಕ್ಕೆ ಬಲವಾಗಿ ಗುದ್ದಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾದ ಮಗು ಕೊನೆಯುಸಿರೆಳೆದಿದೆ. ಮರುದಿನ ಆಸ್ಪತ್ರೆಗೆ ಕರೆತಂದ ಪೋಷಕರು ಮಗು ಬಿಸ್ಕೆಟ್ ತಿಂದು ಕುಸಿದು ಬಿದ್ದಿದೆ ಎಂದು ನಾಟಕವಾಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಮಗು ಆಂತರಿಕ ರಕ್ತಸ್ರಾವದಿಂದ ಮೃತಪಟ್ಟಿದೆ ಎಂಬುದು ದೃಢವಾಗಿದೆ. ವರದಿ ಆಧರಿಸಿ ತನಿಖೆ ನಡೆಸಿದಾಗ ಶಿಜಿಲ್, ತಾನೇ ಮಗುವನ್ನು ಕೊಂದಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ.

