ಕಡಿಮೆ ಬೆಲೆಯ ಕಾರನ್ನ ದುಬಾರಿ ಬೆಲೆಯ ವಾಹನವನ್ನಾಗಿ ಪರಿವರ್ತಿಸೋ ಕ್ರೇಜ್ ಹಲವರಲ್ಲಿದೆ. ಅಂಥದ್ದೊಂದು ಪ್ರಕರಣವೊಂದರಲ್ಲಿ
ಕೇರಳದ 18 ವರ್ಷದ ಯುವಕ ತನ್ನ ಮನೆಯಲ್ಲಿದ್ದ ಮಾರುತಿ 800 ಕಾರನ್ನು ಮಿನಿ ರೋಲ್ಸ್ ರಾಯ್ಸ್ ಲುಕ್ ಆಗಿ ಮಾರ್ಪಡಿಸಿದ್ದಾನೆ.
ಆಟೋಮೊಬೈಲ್ ಉತ್ಸಾಹಿ ಯುವಕ ಹದಿಫ್ ಮಾರುತಿ ಕಾರು, ರೋಲ್ಸ್ ರಾಯ್ಸ್ ಕಾರಿನ ಲುಕ್ ಪಡೆಯಲು 45,000 ರೂಪಾಯಿ ಖರ್ಚು ಮಾಡಿದ್ದಾರೆ.
ಯೂಟ್ಯೂಬ್ ಚಾನೆಲ್ ವೊಂದಕ್ಕೆ ಈ ಬಗ್ಗೆ ಮಾತನಾಡಿದ ಹದಿಫ್, ತನಗೆ ಕಾರುಗಳೆಂದರೆ ಇಷ್ಟ. ಕಡಿಮೆ ಮೌಲ್ಯದ ಕಾರುಗಳನ್ನು ಐಷಾರಾಮಿ ಕಾರುಗಳ ಪ್ರತಿಕೃತಿಗಳನ್ನಾಗಿ ಬದಲಾಯಿಸಲು ಇಷ್ಟಪಡುತ್ತೇನೆ ಮತ್ತು ತನ್ನ ಕಾರಿಗೆ ರೋಲ್ಸ್ ರಾಯ್ಸ್-ಪ್ರೇರಿತ ಲೋಗೋವನ್ನು ತಾನೇ ರಚಿಸಿದ್ದೇನೆ ಎಂದು ಹೇಳಿದರು.
ಮಾರ್ಪಡಿಸಿದ ಮಾರುತಿ 800 ಅನ್ನು ದೊಡ್ಡ ಗ್ರಿಲ್‌ಗಳು, ಬೃಹತ್ ಬಾನೆಟ್, ಮರುವಿನ್ಯಾಸಗೊಳಿಸಲಾದ ಬಂಪರ್, ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಪೇಂಟ್ ಮಾಡಿ ಬದಲಾಯಿಸಲಾಗಿದೆ.
ಇದಕ್ಕೂ ಮೊದಲು ಹದಿಫ್ ಮೋಟಾರ್ ಸೈಕಲ್ ಎಂಜಿನ್ ಬಳಸಿ ಜೀಪ್ ಮಾದರಿ ಸೃಷ್ಟಿಸುವ ಯೋಜನೆಯಲ್ಲಿ ಕೆಲಸ ಮಾಡಿದ್ದರು.
ತಮ್ಮ ಮನೆಯಲ್ಲಿನ ವಾಹನಗಳನ್ನು ಈ ರೀತಿ ಮಾರ್ಪಡಿಸಲು ಇಚ್ಚಿಸುವ ಹದಿಫ್ ತಾವು ವಾಹನಗಳೊಂದಿಗೆ ರಸ್ತೆಗಿಳಿದಾಗ
ಗಮನವನ್ನು ಸೆಳೆಯಲು ಬಯಸುವುದಾಗಿ ತಿಳಿಸಿದ್ದಾರೆ.
https://twitter.com/basiitzargar/status/1538829258771922944?ref_src=twsrc%5Etfw%7Ctwcamp%5Etweetembed%7Ctwterm%5E1538829258771922944%7Ctwgr%5Ea8b3be04d3a90a742ce727e238bd1dbada3bb3ea%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fmoneyco0581749434206-epaper-dh7a9fe6ff1e384d01b8c5d59183b9bde1%2Fkeralateenspendsrs45000toturnmaruti800intorollsroycewatch-newsid-n543270440