HomeIndiaಆತ್ಮಹತ್ಯೆಗೆ ಪ್ರಚೋದನೆ: ಕೇರಳದಲ್ಲಿ ಶಿಮ್ಜಿತಾ ಮುಸ್ತಫಾ ಬಂಧನ

ಆತ್ಮಹತ್ಯೆಗೆ ಪ್ರಚೋದನೆ: ಕೇರಳದಲ್ಲಿ ಶಿಮ್ಜಿತಾ ಮುಸ್ತಫಾ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಸಂಚಲನಕ್ಕೆ ಕಾರಣವಾಗಿರುವ ಪ್ರಕರಣದಲ್ಲಿ ಈಗ ಕೇರಳ ಪೊಲೀಸರು  ಶಿಮ್ಜಿತಾ ಮುಸ್ತಫಾ ಬಂಧಿಸಿದ್ದಾರೆ. ಕೇರಳದಲ್ಲಿ ಬಸ್‌ನಲ್ಲಿ ಪ್ರಯಾಣಿಸುವಾಗ ತನಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಶಿಮ್ಜಿತಾ ಮುಸ್ತಫಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ದೇಶಾದ್ಯಂತ ಸುದ್ದಿ ಮಾಡಿದ್ದಾರೆ.

ದೀಪಕ್ ಯು ಆತ್ಮಹತ್ಯೆ ಪ್ರಕರಣದಲ್ಲಿ ಇದೀಗ ಶಿಮ್ಜಿತಾ ಮುಸ್ತಫಾ ಬಂಧಿಸಲಾಗಿದೆ. ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಲಾಗಿತ್ತು. ಬಸ್‌ನಲ್ಲಿ ಲೈಂಗಿಕ ಕಿರುಕುಳ ನಡೆದಿತ್ತೇ? ಅಥವಾ ಲೈಕ್, ಫಾಲೋವರ್ಸ್‌ಗಾಗಿ ಶಿಮ್ಜಿತಾ ಮುಸ್ತಫಾ ವಿಡಿಯೋ ಮಾಡಿದ್ದಾರೆಯೇ? ಎಂಬುದು ಈಗ ಚರ್ಚೆಯ ವಿಚಾರವಾಗಿದೆ.

35 ವರ್ಷದ ಶಿಮ್ಜಿತಾ ಮುಸ್ತಫಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಕೇರಳದ ಅನೇಕರು ಆಕೆಯ ವಿರುದ್ಧ ಧ್ವನಿ ಎತ್ತಿದ್ದು, ದೀಪಕ್ ಯು ಆತ್ಮಹತ್ಯೆಗೆ ಆಕೆಯೇ ನೇರವಾದ ಕಾರಣ ಎಂದು ಆರೋಪಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏನಿದು ಪ್ರಕರಣ?: ಕೇರಳದಲ್ಲಿ ಬಸ್‌ನಲ್ಲಿ ಸಂಚಾರ ಮಾಡುವಾಗ 42 ವರ್ಷದ ವ್ಯಕ್ತಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ 35 ವರ್ಷದ ಮಹಿಳಾ ಇನ್ಫ್ಲುಯೆನ್ಸರ್ ಶಿಮ್ಜಿತಾ ಮುಸ್ತಫಾ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ಈ ಆರೋಪದ ಬೆನ್ನಲ್ಲೇ ವಿಡಿಯೋದಲ್ಲಿದ್ದ ವ್ಯಕ್ತಿ ದೀಪಕ್ ಯು ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ವಾರ ಶಿಮ್ಜಿತಾ ಮುಸ್ತಫಾ ಮತ್ತು ದೀಪಕ್ ಒಂದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು.

ಆಗ ದೀಪಕ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಹೇಳುವ ವಿಡಿಯೋವೊಂದನ್ನು ಶಿಮ್ಜಿತಾ ಮುಸ್ತಫಾ ರೆಕಾರ್ಡ್ ಮಾಡಿ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿದ್ದು, 20 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದರು.

ಈ ವಿಡಿಯೋ ವೈರಲ್ ಆದ ಬಳಿಕ ದೇಶಾದ್ಯಂತ ಪ್ರಕರಣ ಸುದ್ದಿಯಾಗಿತ್ತು. ವಿಡಿಯೋದಲ್ಲಿ ಶಿಮ್ಜಿತಾ ಮುಸ್ತಫಾ, “ನಿನ್ನೆ, ನಾನು ಸಾರ್ವಜನಿಕ ಬಸ್ಸಿನ ವಿಡಿಯೋವೊಂದನ್ನು ಹಂಚಿಕೊಂಡಿದ್ದೆ, ಅಲ್ಲಿ ವ್ಯಕ್ತಿಯೊಬ್ಬ ನನ್ನ ಒಪ್ಪಿಗೆಯಿಲ್ಲದೆ ಉದ್ದೇಶಪೂರ್ವಕವಾಗಿ ನನ್ನನ್ನು ಮುಟ್ಟಿದ್ದ. ಇದು ಆಕಸ್ಮಿಕ ಅಥವಾ ತಪ್ಪು ತಿಳುವಳಿಕೆಯಲ್ಲ. ಉದ್ದೇಶಪೂರ್ವಕವಾಗಿ ಮಾಡಲಾಗಿದೆ” ಎಂದು ಹೇಳಿದ್ದರು.

ವಿಡಿಯೋದಲ್ಲಿ ಶಿಮ್ಜಿತಾ ಮುಸ್ತಫಾ, “ನನ್ನ ಮುಂದಿದ್ದ ಮಹಿಳೆಯೊಬ್ಬರು ಅಸಹಜವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ನಂತರ ನಾನು ವಿಡಿಯೋ ಮಾಡಲು ಪ್ರಾರಂಭಿಸಿದೆ. ತಾನು ವಿಡಿಯೋ ರೆಕಾರ್ಡ್ ಆಗುತ್ತಿರುವುದು ತಿಳಿದಿದ್ದರೂ ಸಹ, ಆ ವ್ಯಕ್ತಿ ನನ್ನನ್ನು ಮುಟ್ಟಿದ. ಇದು ಉದ್ದೇಶಪೂರ್ವಕ ಕೃತ್ಯ, ತನಗೆ ಯಾವುದೇ ಶಿಕ್ಷೆಯಾಗುವುದಿಲ್ಲ ಎಂಬ ಆತನ ನಂಬಿಕೆ” ಎಂದು ತಿಳಿಸಿದ್ದರು.

ವಿಡಿಯೋ ವೈರಲ್ ಆದ ಬಳಿಕ ಭಾನುವಾರ ದೀಪಕ್ ಕೋಯಿಕ್ಕೋಡ್‌ನಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮನೆಗೆ ಆಧಾರವಾಗಿದ್ದ ಒಬ್ಬನೇ ಮಗನನ್ನು ಕಳೆದುಕೊಂಡು ದೀಪಕ್ ಪೋಷಕರು ಕಂಗಾಲಾಗಿದ್ದಾರೆ.

ಈ ಪ್ರಕರಣದಲ್ಲಿ ದೀಪಕ್ ನಿರಪರಾಧಿಯಾಗಿದ್ದು, ಈ ಘಟನೆಯಿಂದ ತೀವ್ರ ಅವಮಾನಕ್ಕೊಳಗಾಗಿದ್ದರು ಎಂದು ಪೋಷಕರು ತಿಳಿಸಿದ್ದಾರೆ. ವಿಡಿಯೋ ವೈರಲ್ ಆದ ಶನಿವಾರ ಅವರ ಹುಟ್ಟುಹಬ್ಬವಾದರೂ ಅವರು ಏನನ್ನೂ ತಿಂದಿರಲಿಲ್ಲ. ಘಟನೆಯಿಂದ ನೊಂದಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.

ದೀಪಕ್ ಆತ್ಮಹತ್ಯೆ ಬಳಿಕ ಶಿಮ್ಜಿತಾ ಮುಸ್ತಫಾ ಮೊದಲು ಮಾಡಿದ್ದ ವಿಡಿಯೋವನ್ನು ಡಿಲೀಟ್ ಮಾಡಿದ್ದರು. ನಂತರ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಮತ್ತೊಂದು ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದರು. ನಂತರ ಆ ವಿಡಿಯೋವನ್ನು ಕೂಡ ಪ್ರೈವೇಟ್ ಮಾಡಿದ್ದಾರೆ.

ಸೋಮವಾರ ಶಿಮ್ಜಿತಾ ಮುಸ್ತಫಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗವು ಈ ಘಟನೆಯ ಕುರಿತು ಪೊಲೀಸ್ ತನಿಖೆಗೆ ಆದೇಶಿಸಿದೆ. ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಉತ್ತರ ವಲಯದ ಪೊಲೀಸ್ ಉಪ ಮಹಾನಿರೀಕ್ಷಕರಿಗೆ ಸೂಚಿಸಿದೆ.

ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular