HomeInternationalಖುಲಾಯಿಸಿದ ಅದೃಷ್ಟ: ದುಡಿಯಲು ದುಬೈಗೆ ಹೋದ ವ್ಯಕ್ತಿಗೆ ಜಾಕ್ ಪಾಟ್: 45 ಕೋಟಿ ರೂ. ಲಾಟರಿ

ಖುಲಾಯಿಸಿದ ಅದೃಷ್ಟ: ದುಡಿಯಲು ದುಬೈಗೆ ಹೋದ ವ್ಯಕ್ತಿಗೆ ಜಾಕ್ ಪಾಟ್: 45 ಕೋಟಿ ರೂ. ಲಾಟರಿ

ನವದೆಹಲಿ: ಕಳೆದ 11 ವರ್ಷಗಳಿಂದ ಉದ್ಯೋಗಿಯಾಗಿರುವ ಕೇರಳ ಮೂಲದ ವ್ಯಕ್ತಿಗೆ 45 ಕೋಟಿ ರೂಪಾಯಿ ಮೊತ್ತದ ಲಾಟರಿ ಬಹುಮಾನ ಬಂದಿದೆ.

39 ವರ್ಷದ ಶ್ರೀಜು ಬಹುಮಾನ ಪಡೆದ ಅದೃಷ್ಟವಂತ. ಮಹಜೂಜ್ ಸ್ಯಾರ್ಟ್ ಡೇ ಮಿಲಿಯನ್ಸ್ 154ನೇ ಡ್ರಾದಲ್ಲಿ ಶ್ರೀಜು ಅವರಿಗೆ ಬಹುಮಾನ ಬಂದಿದೆ. ದುಬೈನಿಂದ 120 ಕಿಲೋಮೀಟರ್ ದೂರದಲ್ಲಿರುವ ಫೂಜೈರಾದಲ್ಲಿ ಆಯಿಲ್ ಅಂಡ್ ಗ್ಯಾಸ್ ಕಂಪನಿಯಲ್ಲಿ ಕಂಟ್ರೋಲ್ ರೂಮ್ ಆಪರೇಟರ್ ಆಗಿ ಶ್ರೀಜು ಕೆಲಸ ಮಾಡುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅವರಿಗೆ 6 ವರ್ಷದ ಅವಳಿ ಮಕ್ಕಳಿದ್ದಾರೆ. ಮೂರು ವರ್ಷಗಳಿಂದ ಅವರು ತಿಂಗಳಿಗೆ ಎರಡು ಬಾರಿ ಮಹಜೂಜ್ ಸ್ಯಾರ್ಟ್ ಡೇ ಮಿಲಿಯನ್ಸ್ ನಲ್ಲಿ ಲಾಟರಿ ಖರೀದಿಸುತ್ತಿದ್ದರು. ಊರಿನಲ್ಲಿ ಮನೆ ಕಟ್ಟಿಸುವ ಕನಸು ಹೊಂದಿರುವ ಅವರು ಲಾಟರಿಯಲ್ಲಿ ಬಂದ ಈ ಬೃಹತ್ ಮೊತ್ತವನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕೆಂಬುದರ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular