ಚಲಿಸುತ್ತಿರುವ ಕಾರಿನ ಬಾಗಿಲಿನಲ್ಲಿ ನಿಂತ ಪ್ರಧಾನಿ ವಿರುದ್ಧ ದೂರು ದಾಖಲು

ಕೇರಳದ ಕೊಚ್ಚಿಯಲ್ಲಿ ರೋಡ್‌ಶೋನಲ್ಲಿ ಭಾಗಿಯಾಗಿದ್ದ ವೇಳೆ ತಮ್ಮ ಕಾರಿನ ಬಾಗಿಲು ತೆರೆದುಕೊಂಡು ನಿಂತುಕೊಂಡು ಸಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ತ್ರಿಶ್ಶೂರಿನ ನಿವಾಸಿಯೊಬ್ಬರು ದೂರು ದಾಖಲಿಸಿದ್ದಾರೆ.

ಚಲಿಸುತ್ತಿರುವ ವಾಹನವೊಂದರ ಬಾಗಿಲು ತೆರೆದು ಹಾಗೆ ನಿಲ್ಲುವುದು ಅಪಾಯಕಾರಿ ಎಂದು ಜಯಕೃಷ್ಣನ್ ಹೆಸರಿನ ಈ ವ್ಯಕ್ತಿ ದೂರು ಸಲ್ಲಿಸಿದ್ದು, ಕಾರಿನ ಗಾಜುಗಳು ಹೂವುಗಳಿಂದ ಆವೃತವಾಗಿದ್ದ ಕಾರಣ ಚಾಲಕನಿಗೆ ಮುಂದಿನ ರಸ್ತೆ ಕಾಣಿಸುತ್ತಿರಲಿಲ್ಲ ಎಂದಿದ್ದಾರೆ.

ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡುವಂತೆ ಸಮಾಜಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲು ಜಯಕೃಷ್ಣನ್ ದೂರಿನಲ್ಲಿ ಆಗ್ರಹಿಸಿದ್ದಾರೆ. ಪೊಲೀಸ್ ಮಹಾ ನಿರ್ದೇಶಕರು ಹಾಗೂ ಮೊಟಾರು ವಾಹನ ಇಲಾಖೆಗೆ ದೂರು ನೀಡಲಾಗಿದೆ.

ಎರಡು ದಿನಗಳ ಮಟ್ಟಿಗೆ ಕೇರಳ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಸೋಮವಾರ ಕೊಚ್ಚಿಯಲ್ಲಿ ರೋಡ್‌ಶೋದಲ್ಲಿ ಭಾಗಿಯಾಗಿದ್ದು, ನಗರದ ಬೀದಿಗಳಲ್ಲಿ ಕೆಲ ದೂರ ನಡೆದುಕೊಂಡೇ ಸಾಗಿದ್ದರು. ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ಪ್ರಧಾನಿಗೆ ಹೂವಿನ ಸುರಿಮಳೆಗರೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read