HomeKarnatakaದತ್ತಪೀಠದಲ್ಲಿ ನಿಗೂಢವಾಗಿ ಕಣ್ಮರೆಯಾದ ಕೇರಳದ ಬಾಲಕಿ ; 24 ಗಂಟೆ ಕಳೆದರೂ ಸಿಗದ ಸುಳಿವು !

ದತ್ತಪೀಠದಲ್ಲಿ ನಿಗೂಢವಾಗಿ ಕಣ್ಮರೆಯಾದ ಕೇರಳದ ಬಾಲಕಿ ; 24 ಗಂಟೆ ಕಳೆದರೂ ಸಿಗದ ಸುಳಿವು !

ಚಿಕ್ಕಮಗಳೂರು : ಕಾಫಿನಾಡಿನ ಪ್ರಸಿದ್ಧ ಪ್ರವಾಸಿ ತಾಣವಾದ ದತ್ತಪೀಠದ ತಪ್ಪಲಿನ ಮಾಣಿಕ್ಯಾಧಾರ ಜಲಪಾತದ ಬಳಿ ಪ್ರವಾಸಕ್ಕೆ ಬಂದಿದ್ದ 15 ವರ್ಷದ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದು, ಒಂದು ದಿನ ಕಳೆದರೂ ಆಕೆಯ ಸುಳಿವು ಪತ್ತೆಯಾಗಿಲ್ಲ.

ಘಟನೆಯ ವಿವರ: ಕೇರಳದ ಪಾಲಕ್ಕಾಡ್ ಜಿಲ್ಲೆಯ ಶ್ರೀನಂದ (15) ನಾಪತ್ತೆಯಾದ ಬಾಲಕಿ. ಶಾಲಾ ರಜೆ ಹಿನ್ನೆಲೆಯಲ್ಲಿ ಕುಟುಂಬದೊಂದಿಗೆ ಕರ್ನಾಟಕ ಪ್ರವಾಸಕ್ಕೆ ಬಂದಿದ್ದ ಈಕೆ, ಉತ್ತರ ಕರ್ನಾಟಕವನ್ನು ಸುತ್ತಿ ಚಿಕ್ಕಮಗಳೂರಿಗೆ ಬಂದಿದ್ದಳು. ಏಪ್ರಿಲ್ 7 ರಂದು ಮಾಣಿಕ್ಯಾಧಾರ ಜಲಪಾತದ ಬಳಿ ಮೆಟ್ಟಿಲುಗಳನ್ನು ಇಳಿಯುತ್ತಿದ್ದಾಗ ಕುಟುಂಬದವರು ಮುಂದೆ ಹೋಗಿದ್ದರು. ಈ ವೇಳೆ ಹಿಂದಿದ್ದ ಬಾಲಕಿ ಕ್ಷಣಾರ್ಧದಲ್ಲಿ ಮಾಯವಾಗಿದ್ದಾಳೆ.

ತೀವ್ರಗೊಂಡ ಶೋಧ ಕಾರ್ಯ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ, ಪೊಲೀಸ್ ಮತ್ತು ಅಗ್ನಿಶಾಮಕ ದಳದ 30ಕ್ಕೂ ಹೆಚ್ಚು ಸಿಬ್ಬಂದಿ ಮಧ್ಯರಾತ್ರಿಯವರೆಗೆ ಹುಡುಕಾಟ ನಡೆಸಿದ್ದಾರೆ.ಏಪ್ರಿಲ್ 8 ರ ಮುಂಜಾನೆಯಿಂದ ಎಸ್.ಡಿ.ಆರ್.ಎಫ್ (SDRF) ತಂಡ ಕೂಡ ಕಾರ್ಯಾಚರಣೆಗೆ ಇಳಿದಿದೆ.ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿ 5 ತಂಡಗಳಾಗಿ ವಿಂಗಡಿಸಿಕೊಂಡು ಥರ್ಮಲ್ ಡ್ರೋನ್ ಬಳಸಿ ದಟ್ಟ ಕಾನನದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಹೆಚ್ಚಿದ ಆತಂಕ ಮತ್ತು ಅನುಮಾನ: ಬಾಲಕಿ ನಾಪತ್ತೆಯಾದ ಜಾಗವು ಕಡಿದಾದ ಪ್ರದೇಶವಾಗಿದ್ದರೂ, ಪ್ರಸ್ತುತ ಮಳೆ ಇಲ್ಲದ ಕಾರಣ ಕಾಡು ಒಣಗಿದೆ. ದಾರಿ ತಪ್ಪಿದ್ದರೂ ಅಥವಾ ಆಕಸ್ಮಿಕವಾಗಿ ಬಿದ್ದಿದ್ದರೂ ಇಷ್ಟೊಂದು ಜನ ಹುಡುಕಿದಾಗ ಸಿಗದಿರುವುದು ಪೋಷಕರಲ್ಲಿ ಮತ್ತು ಅಧಿಕಾರಿಗಳಲ್ಲಿ ನಾನಾ ಅನುಮಾನಗಳನ್ನು ಮೂಡಿಸಿದೆ. ಕುಟುಂಬದ ಜೊತೆಗಿದ್ದ ಬಾಲಕಿ ಕ್ಷಣಾರ್ಧದಲ್ಲಿ ಕಣ್ಮರೆಯಾಗಿರುವುದು ನಿಗೂಢವಾಗಿ ಉಳಿದಿದೆ. ಪ್ರಸ್ತುತ ಅರಣ್ಯದ ಪ್ರತಿ ಮೂಲೆಯಲ್ಲೂ ಶೋಧ ಕಾರ್ಯ ಮುಂದುವರಿದಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular