ಆಗಸ್ಟ್ 15ಕ್ಕೆ ತೆರೆ ಮೇಲೆ ಬರಲಿದೆ ಕೀರ್ತಿ ಸುರೇಶ್ ಅಭಿನಯದ ‘ರಘು ತಾಥಾ’

ಸುಮನ್ ಕುಮಾರ್ ನಿರ್ದೇಶನದ ಕೀರ್ತಿ ಸುರೇಶ್ ಅಭಿನಯದ ಬಹು ನಿರೀಕ್ಷಿತ ರಘು ತಾತ ಚಿತ್ರ ಇದೆ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ ದಿನದಂದು ತೆರೆ ಮೇಲೆ ಬರಲಿದೆ. ಈ ಕುರಿತು ನಟಿ ಕೀರ್ತಿ ಕೀರ್ತಿ ಸುರೇಶ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ  ತಿಳಿಸಿದ್ದಾರೆ. ‘ಪುಷ್ಪ2’ ಮತ್ತು ‘ರಘು ತಾಥಾ’ ಒಂದೇ ದಿನ ರಿಲೀಸ್ ಆಗಲಿದ್ದು, ಸಿನಿ ಪ್ರೇಕ್ಷಕರಿಗೆ ಒಳ್ಳೆಯ ಮನರಂಜನೆ ಸಿಗಲಿದೆ.

ಕನ್ನಡದ ಶ್ರೀಮಂತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಕೀರ್ತಿ ಸುರೇಶ್ ಸೇರಿದಂತೆ ಎಂ ಎಸ್ ಬಾಸ್ಕರ್, ರವೀಂದ್ರ ವಿಜಯ್, ದೇವದರ್ಶಿನಿ, ರಾಜೀವ್ ರವೀಂದ್ರನಾಥನ್, ಜಯಕುಮಾರ್, ಆನಂದ್ಸಾಮಿ, ರಾಜೇಶ್ ಬಾಲಚಂದ್ರನ್, ಇಸ್ಮತ್ ಬಾನು, ಕೆಎಸ್. ಮಿಪ್ಪು, ಮುಖೇಶ್, ಜಾನಕಿ, ಆಧಿರಾ ಪಾಂಡಿಲಕ್ಷ್ಮಿ, ಚು ಖೋಯ್ ಶೆಂಗ್ ತೆರೆ ಹಂಚಿಕೊಂಡಿದ್ದಾರೆ. ಸೀನ್ ರೋಲ್ಡನ್ ಮ್ಯೂಸಿಕ್ ಕಂಪೋಸ್ ಮಾಡಿದ್ದು,  ಟಿ ಎಸ್ ಸುರೇಶ್ ಸಂಕಲನ, ಯಾಮಿನಿ ಯಜ್ಞಮೂರ್ತಿ ಛಾಯಾಗ್ರಹಣವಿದೆ. ಮನೋಜ್ ಕುಮಾರ್ ಸಂಭಾಷಣೆ ಬರೆದಿದ್ದಾರೆ.

https://twitter.com/KeerthyOfficial/status/1796437711253070183?ref_src=twsrc%5Etfw%7Ctwcamp%5Etweetembed%7Ctwterm%5E1796437711253070183%7Ctwgr%5Eddc0d5017617fce1a10923f185898c49a

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read