UPI ಮೂಲಕ ವಹಿವಾಟು ಮಾಡುವಾಗ ಈ ವಿಷಯ ನೆನಪಿನಲ್ಲಿಡಿ; ಇಲ್ಲದಿದ್ದಲ್ಲಿ ವಂಚಕರ ಪಾಲಾಗಬಹುದು ನಿಮ್ಮ ಹಣ !

ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಸದ್ಯ ಡಿಜಿಟಲ್ ಪಾವತಿಯ ಅತ್ಯಂತ ಜನಪ್ರಿಯ ವಿಧಾನವಾಗಿದೆ. ಈ ವ್ಯವಸ್ಥೆಯನ್ನು ಬಳಸಿಕೊಂಡು ದೇಶದ ಕೋಟಿಗಟ್ಟಲೆ ಜನರು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣವನ್ನು ವರ್ಗಾಯಿಸುತ್ತಾರೆ. UPI ಬಳಕೆದಾರರ ಸಂಖ್ಯೆ ಹೆಚ್ಚಿದಂತೆ ಅದಕ್ಕೆ ಸಂಬಂಧಿಸಿದ ವಂಚನೆಯ ಪ್ರಕರಣಗಳು ಕೂಡ ವೇಗವಾಗಿ ಹೆಚ್ಚುತ್ತಿವೆ. UPI ಪಾವತಿಯನ್ನು ನಿಯಂತ್ರಿಸುವ NPCI, ವಂಚನೆಯನ್ನು ತಡೆಯಲು ಕೆಲವು ಸುಲಭದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದೆ. UPI ಪಾವತಿಯನ್ನು ಮಾಡುವಾಗ ನಿಮ್ಮ ವಹಿವಾಟನ್ನು ಸುರಕ್ಷಿತಗೊಳಿಸಲು ಬಯಸಿದರೆ ಈ ಸಲಹೆಗಳನ್ನು ಅನುಸರಿಸಬಹುದು.

NPCI ಪ್ರಕಾರ, UPI ಬಳಕೆದಾರರು ಹಣವನ್ನು ಸ್ವೀಕರಿಸಲು PIN ಅನ್ನು ನಮೂದಿಸುವ ಅಗತ್ಯವಿಲ್ಲ. ಹಣವನ್ನು ವರ್ಗಾಯಿಸಲು ಯಾವಾಗಲೂ PIN ಅನ್ನು ನಮೂದಿಸಬೇಕಾಗುತ್ತದೆ. ಖಾತೆಗೆ ಹಣವನ್ನು ವರ್ಗಾಯಿಸುವ ಮೊದಲು, ಹಣವನ್ನು ಸ್ವೀಕರಿಸುವ ವ್ಯಕ್ತಿಯ UPI ಐಡಿಯನ್ನು ಕ್ರಾಸ್-ಚೆಕ್ ಮಾಡಿ. ಪರಿಶೀಲನೆ ಇಲ್ಲದೆ ಯಾರಿಗೂ ಪಾವತಿ ಮಾಡಬೇಡಿ.

ನಿಮ್ಮ ಅಪ್ಲಿಕೇಶನ್‌ನ ಪಿನ್ ಪುಟದಲ್ಲಿ ಮಾತ್ರ UPI ಪಿನ್ ನಮೂದಿಸಿ. ನಿಮ್ಮ UPI ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.ಹಣವನ್ನು ವರ್ಗಾಯಿಸಲು ಮಾತ್ರ QR ಕೋಡ್ ಅನ್ನು ಸ್ಕ್ಯಾನ್ ಮಾಡಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಹಣವನ್ನು ಸ್ವೀಕರಿಸಲು ನಿಮಗೆ QR ಕೋಡ್ ಅಗತ್ಯವಿಲ್ಲ. ನಿಮ್ಮ ಮೊಬೈಲ್‌ನಲ್ಲಿ ಯಾವುದೇ ರೀತಿಯ ಸ್ಕ್ರೀನ್ ಶೇರಿಂಗ್ ಆಪ್ ಡೌನ್‌ಲೋಡ್ ಮಾಡುವುದನ್ನು ತಪ್ಪಿಸಿ. ಇದರಿಂದಾಗಿ, ನಿಮ್ಮ ವೈಯಕ್ತಿಕ ಮಾಹಿತಿಗಳಾದ UPI ಐಡಿ, ಪಿನ್ ಇತ್ಯಾದಿಗಳನ್ನು ವಂಚಕರು ಕದಿಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read