ಯುಜಿ ಸಿಇಟಿ, ನೀಟ್ ಅಭ್ಯರ್ಥಿಗಳೇ ಗಮನಿಸಿ: ಸೀಟು ಹಂಚಿಕೆ ಬಗ್ಗೆ ಕೆಇಎ ಮುಖ್ಯ ಮಾಹಿತಿ

ವೈದ್ಯಕೀಯ, ದಂತವೈದ್ಯಕೀಯ ಮತ್ತು ಆಯುಷ್ ಕೋರ್ಸುಗಳು – ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನ, ವೆಟರಿನರಿ, ಬಿಎಸ್‌ಸಿ (ನರ್ಸಿಂಗ್) ಬಿ-ಫಾರ್ಮ್, ಫಾರ್ಮ್-ಡಿ ಮುಂತಾದ ಕೋರ್ಸುಗಳ ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ದಿನಾಂಕ 18-09-2024 ರಂದು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ ಎಂದು ಕೆಇಎ ತಿಳಿಸಿದೆ.

MCC ವೆಬ್‌ಸೈಟಿನಲ್ಲಿ ಪ್ರಚುರ ಪಡಿಸಲಾದ ವೇಳಾಪಟ್ಟಿಯ ಪ್ರಕಾರ ಎರಡನೇ ಸುತ್ತಿನ ಯುಜಿನೀಟ್ ಅಖಿಲ ಭಾರತ ಸೀಟು ಹಂಚಿಕೆ ಫಲಿತಾಂಶಗಳನ್ನು 19-09-2024 ರಂದು ನಿರೀಕ್ಷಿಸಲಾಗಿದೆ.

ಕೆಇಎ ಯುಜಿಸಿಇಟಿ-ಯುಜಿನೀಟ್ ಎರಡನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶಗಳ ಪ್ರಕಟಣೆಯ ನಂತರ, ಎರಡನೇ ಸುತ್ತಿನ ಅಖಿಲ ಭಾರತ ಯುಜಿನೀಟ್ MCC ಕೌನ್ಸಿಲಿಂಗ್ ನಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳಿಗೆ, ಕೆಇಎ ನಿಂದ ಹಂಚಿಕೆಯಾದ ಸೀಟಿಗೆ ಸೇರಲು ಅಥವಾ ಅಖಿಲ ಭಾರತ ಕೌನ್ಸಿಲಿಂಗ್ ಮೂಲಕ ಹಂಚಿಕೆಯಾದ ಸೀಟನ್ನು ಉಳಿಸಿಕೊಳ್ಳಲು ನಿರ್ಧಾರ ತೆಗೆದುಕೊಳ್ಳಲು ಸಮಯವನ್ನು ನೀಡಲಾಗುತ್ತಿದೆ.

ಕೆಇಎ ನಿಂದ ಹಂಚಿಕೆಯಾದ ಸೀಟನ್ನು ರದ್ದುಪಡಿಸಿಕೊಳ್ಳಲು ಮತ್ತು ಅಖಿಲ ಭಾರತ ಸೀಟನ್ನು ಉಳಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳು, ದಿನಾಂಕ 20-09-2024ರ ಬೆಳಿಗ್ಗೆ 11.00 ರೊಳಗಾಗಿ ಕೆಇಎ ನಿಂದ ಹಂಚಿಕೆಯಾದ ಯುಜಿನೀಟ್ ಸೀಟನ್ನು ಕೆಇಎ, ಬೆಂಗಳೂರು ಇಲ್ಲಿ ಖುದ್ದಾಗಿ ರದ್ದು ಪಡಿಸಿಕೊಳ್ಳಬೇಕು. ಅಂತಹ ಅಭ್ಯರ್ಥಿಗಳಿಗೆ ರೂ.10,000/- ದಂಡ ವಿಧಿಸಲಾಗುವುದು. ಉಳಿದ ಮೊತ್ತವನ್ನು ಹಿಂದಿರುಗಿಸಲಾಗುವುದು (ಸೀಟು ರದ್ದು ಪಡಿಸಿಕೊಳ್ಳುವ ಸಮಯದಲ್ಲಿ ಅಖಿಲ ಭಾರತ ಕೌನ್ಸಿಲಿಂಗ್ ನಲ್ಲಿ ಹಂಚಿಕೆಯಾದ ಸೀಟುಗಳ ವಿವರಗಳನ್ನು ಖುದ್ದಾಗಿ ಕೆಇಎ, ಬೆಂಗಳೂರು ಇಲ್ಲಿ ಸಲ್ಲಿಸಬೇಕು)

ಅಭ್ಯರ್ಥಿಗಳ ಅನುಕೂಲಕ್ಕಾಗಿ. ಕೆಇಎ ನಲ್ಲಿ ರದ್ದಾದ ಎಲ್ಲಾ ಸೀಟುಗಳನ್ನು (ಯಾವುದಾದರು ಇದ್ದಲ್ಲಿ) ಪರಿಗಣಿಸಿ ಮತ್ತು ಅರ್ಹ ಅಭ್ಯರ್ಥಿಗಳು ಎರಡನೇ ಸುತ್ತಿಗೆ ನಮೂದಿಸಿದ ಅದೇ ಆದ್ಯತಾ ಕ್ರಮದಲ್ಲಿನ Options ಗಳೊಂದಿಗೆ ಎರಡನೇ ಸುತ್ತಿನ ಸೀಟು ಹಂಚಿಕೆಯನ್ನು ಪುನಃ ರನ್ (Re-run) ಮಾಡಿ, ಎರಡನೇ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಉನ್ನತ ಕ್ರಮಾಂಕದ ಸೀಟು ಹಂಚಿಕೆಯು ಆಗುವ ಸಾಧ್ಯತೆ ಇರುತ್ತದೆ. Options ಗಳ ಆದ್ಯತೆಗಳನ್ನು ಬದಲಾಯಿಸಲು ಅವಕಾಶವಿರುವುದಿಲ್ಲ.

ಇತರೆ ಅಭ್ಯರ್ಥಿಗಳಿಗೆ ದಂಡವಿಲ್ಲದೆ ಯಾವುದೇ ಸೀಟನ್ನು ರದ್ದು ಪಡಿಸುವುದಿಲ್ಲ.(applicable penalty)

ಮುಂದಿನ ಚಟುವಟಿಕೆಗಳ ಪ್ರಕ್ರಿಯೆ ಮತ್ತು ಮಾಹಿತಿಯನ್ನು ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read