ಬೆಂಗಳೂರು: ಯುಜಿ ಸಿಇಟಿ ಮತ್ತು ಯುಜಿ ನೀಟ್ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪರೀಕ್ಷೆ ಪ್ರಾಧಿಕಾರ(KEA) ತಿಳಿಸಿದೆ.
ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ ಗಳಿಗೆ ಎರಡನೇ ಹಂತದ ಪ್ರವೇಶ ಪ್ರಕ್ರಿಯೆ ಸೆ. 23 ರಿಂದ ಆರಂಭವಾಗಲಿದೆ.
ಈ ಮೊದಲೇ ತಿಳಿಸಿದಂತೆ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್ ಗಳಿಗೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಯಾವುದೇ ಆಯ್ಕೆ ಲಭ್ಯ ಇರುವುದಿಲ್ಲ. ಈ ಅಭ್ಯರ್ಥಿಗಳು ಸೆ. 24 ರಿಂದ 26 ರವರೆಗೆ ಹಂಚಿಕೆಯಾಗಿರುವ ಸೀಟಿಗೆ ಶುಲ್ಕ ಪಾವತಿಸಿ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡು ನಿಗದಿತ ದಿನಾಂಕದೊಳಗೆ ಆಯಾ ಕಾಲೇಜುಗೆ ಪ್ರವೇಶ ಪಡೆದುಕೊಳ್ಳಬೇಕೆಂದು ತಿಳಿಸಲಾಗಿದೆ.
#UGCET #UGNEET 2nd round seat allotment results has been announced in #KEA website. UGCET ಪ್ರವೇಶಕ್ಕೆ Choice 1 & 2 ದಾಖಲಿಸಿದವರು ಸೆ.23ರಿಂದ 26ರವರೆಗೆ ಶುಲ್ಕ ಪಾವತಿಸಬೇಕು. Choice 1 ಆಯ್ಕೆ ಮಾಡಿದವರು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡು ಸೆ.26ರೊಳಗೆ ಕಾಲೇಜಿಗೆ ವರದಿಯಾಗಬೇಕು.@CMofKarnataka@drmcsudhakar pic.twitter.com/pzOfLvrWHb
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) September 22, 2024
#UGNEET ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟಣೆ ನಂತರ ಅಭ್ಯರ್ಥಿಗಳು ಅನುಸರಿಸಬೇಕಾದ ಕಾರ್ಯವಿಧಾನಗಳು ಇಂತಿವೆ. ಎಚ್ಚರಿಕೆಯಿಂದ ಓದಿ ಆ ಪ್ರಕಾರ ಮಾಡಿ.Visit #KEA website for more information.
– H Prasanna ED KEA@CMofKarnataka @drmcsudhakar pic.twitter.com/RyLXogvQFf— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) September 22, 2024

